Crime

ಉಡುಪಿ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾದ ಶ್ರುತಿ ನಾಮಪತ್ರ ಸಲ್ಲಿಕೆ

ಇಂದು ಪೆರಂಪಳ್ಳಿ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾದ  ಶ್ರುತಿ ಅವರು ಉಡುಪಿ ನಗರಸಭೆಯಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಮುಖಂಡರಾದ ಎಂ ಏ ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುರಳಿ ಶೆಟ್ಟಿ, ಕುಶಲ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಹಬೀಬ್ ಆಲಿ, ಶಬ್ಬೀರ್, ಹರೀಶ್ ಶೆಟ್ಟಿ, ಗೀತಾ ವಾಘ್ಲೆ, ಮಮತಾ ಶೆಟ್ಟಿ, ಅಗ್ನೇಲ್, ರೋಶನ್ ಶೆಟ್ಟಿ, ಜೋಷಿ ಪಿಂಟೋ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪೆರಂಪಳ್ಳಿ ವಾರ್ಡಿನ ಮುಖಂಡರು ಹಾಗೂ ಕಾರ್ಯಕರ್ತರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪೆರಂಪಳ್ಳಿ ವಾರ್ಡಿನ ಉಪಚುನಾವಣೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಾಯಕರಾದ ರಮೇಶ್ ಪೂಜಾರಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಮ್ಯಾಕ್ಸಿಮ್ ಡಿಸೋಜಾ, ನಾಸಿರ್ ಯಾಕೂಬ್‌, ಮಾಧವ ಬನ್ನಂಜೆ, ಆನಂದ್ ಪೂಜಾರಿ, ಮಮತಾ ಶೆಟ್ಟಿ, ಹಾಗೂ ಡಿಯೋನ್ ಡಿಸೋಜಾ ಅವರು ಉಸ್ತುವಾರಿಗಳಾಗಿ ನೇಮಕಗೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button