CrimeUdupi

ಉಡುಪಿ: ಆನ್ಲೈನ್’ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ 61 ಲಕ್ಷ ವಂಚನೆ

ಉಡುಪಿ: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಬರೋಬ್ಬರಿ 61 ಲಕ್ಷ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ

ಬಿ. ಚಂದ್ರಶೇಖರ ( 70) ಹೆಗ್ಗೋಡ್ಲು ಇವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ಆ್ಯಪ್ ನಲ್ಲಿ ಸಂಪರ್ಕಿಸಿ, ಟ್ರೆಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೇಡಿಂಗ್ ಆ್ಯಪ್‌ನ ಲಿಂಕ್ ಕಳುಹಿಸಿದ್ದು, ಇದನ್ನು ನಂಬಿದ ಅವರು ಲಿಂಕ್‌ನಿಂದ Choice Equity Broking Pvt Ltd ಎಂಬ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿ ನಂತರದಲ್ಲಿ  ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ದಿನಾಂಕ: 19.12.2023 ರಿಂದ ದಿನಾಂಕ: 08.01.2024 ರ ತನಕ ಹಂತ ಹಂತವಾಗಿ ರೂ.61,90,000/-  ಹಣವನ್ನು ಪಾವತಿಸಿದ್ದಾರೆ.

ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲಿ ಲಾಭಾಂಶವನ್ನು ನೀಡದೆ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2024 ಕಲಂ: 66(D)ಐ.ಟಿ. ಆಕ್ಟ್ , 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button