CrimeUdupi

ಉಡುಪಿ | ಕಳವು ಆರೋಪಿಯ ಬಂಧನ

ಉಡುಪಿ: ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಜು.5ರಂದು ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರಾಜ್ಯ ಕಳವು ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

IMG 20250802 WA0064 Crime, Udupi

ಬಂಧಿತ ಆರೋಪಿಯನ್ನು ಮೊಹಮ್ಮದ್ ಆಸೀಫ್ ಬೆಟಗೇರಿ ಎಂದು ಗುರುತಿಸಲಾಗಿದೆ. ಕೊಡಂಕೂರು ಮೂರು ಮನೆಗಳಲ್ಲಿ ನಡೆದ ಕಳ್ಳತನದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ತನಿಖೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ತಂಡವು ಜು.26ರಂದು ಮುಹಮ್ಮದ್ ಆಸೀಪ್ ಬೆಟಗೇರಿ ದಸ್ತಗಿರಿ ಮಾಡಿತ್ತು.

ವಿಚಾರಣೆ ನಡೆಸಿದಾಗ ಆತ, ತನ್ನ ಸಹಚರರೊಂದಿಗೆ ಸೇರಿಕೊಂಡು ಒಂದು ವಾಹನದಲ್ಲಿ ಮಧ್ಯರಾತ್ರಿಯಲ್ಲಿ ಬಂದು ಕೊಡಂಕೂರಿನಲ್ಲಿ 3 ಮನೆಗಳ ಬೀಗವನ್ನು ಮುರಿದು ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳನ್ನು ಭಟ್ಕಳ ಹಾಗೂ ಶಿರಸಿ ಕಡೆಗಳಲ್ಲಿ ಮಾರಾಟ ಮಾಡಿ ಹಣವನ್ನು ಪಡೆದಿರುವುದಾಗಿ ತಿಳಿಸಿದ್ದನು.

ಆರೋಪಿ ತಿಳಿಸಿದಂತೆ ಭಟ್ಕಳ ಹಾಗೂ ಶಿರಸಿ ನಗರದಲ್ಲಿ ಕಳವು ಮಾಡಿ ವಿಲೇವಾರಿ ಮಾಡಿದ ಸುಮಾರು 8.50 ಲಕ್ಷ ರೂ. ಮೌಲ್ಯದ ಅಂದಾಜು 95.5ಗ್ರಾಂ ಚಿನ್ನಾಭರಣ 255 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈತ ವಿಚಾರಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಈ ಹಿಂದೆ ಗೋವಾದಲ್ಲಿ 4 ಪ್ರಕರಣಗಳು, ಉತ್ತರ ಪ್ರದೇಶ ರಾಜ್ಯದಲ್ಲಿಯೂ ಕೂಡ ಕಳವು ಹಾಗೂ ಇತರ ಪ್ರಕರಣಗಳಲ್ಲಿ ಹಾಗೂ ತನ್ನ ಸಹೋದರ ಆರೀಫ್, ಅನೀಸ್ ಹಾಗೂ ಸಂಬಂಧಿ ಸಲೀಂ, ಶೋಯೆಬ್ ಎಲ್ಲರೂ ಸೇರಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿ ಆಸೀಫ್ ಸಹೋದರ ಆರೀಫ್ ಹಾಗೂ ಇತರರು ತಲೆಮರೆಸಿಕೊಂಡಿದ್ದು ಪತ್ತೆಯ ಕಾರ್ಯಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣಾ ಎಸ್ಸೈಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ನಾರಯಣ ಬಿ.ಗೋಪಾಲಕೃಷ್ಣ, ಠಾಣಾ ಸಿಬ್ಬಂದಿ ಪ್ರಸನ್ನ ಸಿ., ಹರೀಶ, ಸಂತೋಷ್ ಶೆಟ್ಟಿ, ಆನಂದ, ಸಂತೋಷ್ ರಾಥೋಡ್, ಶಿವು ಕುಮಾರ್, ಹೇಮಂತ ಕುಮಾರ್, ನೇತ್ರಾವತಿ ಸ್ಪೂರ್ತಿ ಹಾಗೂ ಬ್ರಹ್ಮಾವರ ಠಾಣೆಯ ಇಮ್ರಾನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಪಾಲ್ಗೊಂಡಿದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button