ಎಫ್ ಎಸ್ ಎಲ್ ತನಿಖೆಗೆ ವಿಡಿಯೊ ರವಾನೆ, ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದಲ್ಲಿ ದೂರು ದಾಖಲು

ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿರುವ ಸಾಕಷ್ಟು ವಿಡಿಯೊಗಳ ಸಾಕ್ಷಿಗಳಿವೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಆರಂಭಿಸಿರುವುದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸ್ವಾಗತಿಸಿದ್ದಾರೆ.

ಹಾಸನ ಸಂಸದರಿಗೆ ಸಂಬಂಧಪಟ್ಟವುಗಳು ಎಂದು ಹೇಳಲಾಗುತ್ತಿರುವ ವಿಡಿಯೊಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ನ್ನು ಕಂಪ್ಯೂಟರ್ ಲ್ಲಿ ಹಾಕಿದ್ದು ನಿಜ. ಆದರೆ ನನಗೆ ನೋಡಲು ಬಹಳ ಕಷ್ಟವಾಯಿತು. ಅದರ ಬಗ್ಗೆ ಮಾಹಿತಿ ತಿಳಿದುಕೊಂಡಾಗ ಬಹಳಷ್ಟು ಹೆಣ್ಣುಮಕ್ಕಳ ವಿಡಿಯೊಗಳು ಅದರಲ್ಲಿವೆ. ಸಾಕಷ್ಟು ಮಹಿಳೆಯರು ನೊಂದಿದ್ದಾರೆ. ಸಾಕಷ್ಟು ಮಹಿಳೆಯರ ಲೈಗಿಂಕ ಚಿತ್ರಣ ಮಾಲಾಗಿದೆ. ಪೆನ್ ಡ್ರೈವ್ ನಲ್ಲಿ ದೌರ್ಜನ್ಯದ ವಿಡಿಯೋಗಳಿವೆ. ಅಧಿಕಾರ ಹಾಗೂ ಸ್ಥಾನ ದೂರುಪಯೋಗ ಮಾಡಿಕೊಂಡು ಮಹಿಳೆಯರ ಅಸಾಹಯಕ ಬಳಸಿಕೊಂಡು ಲೈಗಿಂಕ ಚಿತ್ರಿಕರಣ ಮಾಡಲಾಗಿದೆ ಎಂದು ಆರೋಪಿಸಿದರು.

ಲೈಂಗಿಕ ಚಿತ್ರೀಕರಣ ಮಾಡಿರುವುದು ನಿಜ, ಕಿರುಕುಳ ನೀಡಿದ ವ್ಯಕ್ತಿಯೇ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಚಿತ್ರೀಕರಣ ಮಾಡಿದ್ದಾರೆ. ಈ ರೀತಿಯ ಕೃತ್ಯ ಮೊದಲ ಬಾರಿಗೆ ಆಗಿದ್ದು ಎಂದು ಕಾಣುತ್ತದೆ, ಸಾವಿರಾರು ಮಹಿಳೆಯರು ಒಬ್ಬ ವ್ಯಕ್ತಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಸಾವಿರಾರು ಹೆಣ್ಣುಮಕ್ಕಳ ಭವಿಷ್ಯವಿದೆ ಎಂದು ಕಳಕಳಿಯಿಂದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದೆ. ಕೂಡಲೇ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿರುವುದು ತೃಪ್ತಿ ತಂದಿದೆ ಎಂದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರೀಕರಣ ಮಾಡಿದವರು ಮತ್ತು ವಿತರಿಸಿದವರು ಇಬ್ಬರಿಗೂ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಎಫ್ಎಸ್ ಎಲ್ ಪರೀಕ್ಷೆಗೆ ವಿಡಿಯೊ ರವಾನೆ: ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗುತ್ತಿರುವ ವಿಡಿಯೊಗಳ ಸತ್ಯಾಸತ್ಯತೆ ಪರೀಕ್ಷಿಸಲು ಎಫ್ಎಸ್ ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಹಾಸನದಲ್ಲಿ ದೂರು ದಾಖಲು: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಮಹಿಳಾ ಆಯೋಗದ ಅಧ್ಯಕ್ಷೆಗೆ ದೂರು ನೀಡಿದ ನಂತರ ಅದರ ಸತ್ಯಾಸತ್ಯತೆ ಪರಿಶೀಲಿಸಿ ಹಾಸನ ಎಸ್ಪಿಯವರಿಗೆ ಹಸ್ತಾಂತರಿಸಿದರು. ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸುವಂತೆ ಒತ್ತಾಯಿಸಿದರು. ಅದರ ಪ್ರಕಾರ ಇಂದು ಹಾಸನ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಸು ದಾಖಲಾಗಿದ್ದು ಅಲ್ಲಿಗೆ ಎಸ್ ಐಟಿ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆಯಿದೆ.

Latest Indian news

Popular Stories