
ವಿಜಯಪುರ ಬ್ರೇಕಿಂಗ್: ಸರಿಯಾದ ಸಮಯಕ್ಕೆ ಕರೆಂಟ್ ನೀಡದಕ್ಕೆ ರೈತರ ಆಕ್ರೋಶ | ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆಯನ್ನು ತಂದ ರೈತರು
ವಿಜಯಪುರ: ವರದಿ – ಸಮಿಯುಲ್ಲಾ ಉಸ್ತಾದ
ಸರಿಯಾದ ಸಮಯಕ್ಕೆ ಕರೆಂಟ್ ನೀಡದಕ್ಕೆ ರೈತರ ಆಕ್ರೋಶ ವ್ಯಕ್ತಪಡಿಸಿ ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆಯನ್ನು ತಂದು ಬಿಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದಲ್ಲಿ ಘಟನೆ ನಡೆದಿದ್ದು ಪ್ರತಿದಿನ ತಡರಾತ್ರಿ ಕರೆಂಟ್ ನೀಡುತ್ತಾರೆ. ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಇದೆ ಎಂದರು ಸಹ ಅಧಿಕಾರಿಗಳು ಕೇಳುತ್ತಿಲ್ಲ. ರಾತ್ರಿ ವೇಳೆ ಕರೆಂಟ್ ನೀಡಿದರೆ ನಾವೇನು ಮಾಡೋದು. ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಎಂದು ಮೊಸಳೆಯನ್ನ ತಂದಿದ್ದೇವೆ ಎಂದು ರೈತರು ಹೇಳಿದರು.
ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿತ್ತು. ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದಾರೆಮ
ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡ ಹೋಗಿದ್ದಾರೆ ಎಂದು ತಿಳಿದು ಬಂದಿದೆ.




