
Crime
ವಿಜಯಪುರ: ಹೆಂಡತಿ ಹತ್ಯೆಗೈದು ಭಾವಿಗೆ ಎಸೆದ ಗಂಡ
ವಿಜಯಪುರ : ಹೆಂಡತಿಯ ಹತ್ಯೆಗೈದು ಭಾವಿಯಲ್ಲಿ ಎಸೆದು ಫರಾರಿಯಾಗಿರುವ ಘಟನೆ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ.
ರೇಖಾ ನಾಗಪ್ಪ ಕೊಣ್ಣೂರ ಹತ್ಯೆಯಾಗಿರುವ ದುರ್ದೈವಿ. ಇನ್ನು ಗಂಡ ನಾಗಪ್ಪ ಶಂಕರೆಪ್ಪ ಕೊಣ್ಣೂರ, ಶಂಕರೆಪ್ಪ ಕೊಣ್ಣೂರ, ಸುಸಲವ್ವ ಕೊಣ್ಣೂರ ವಿರುದ್ಧ ದೂರು ದಾಖಲಾಗಿದೆ.
ಅಲ್ಲದೇ, ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




