ಕೊಡಗು: ವಿವೇಕಾನಂದರ ಚಿಂತನೆ ಅರ್ಥೈಸಿದರೆ ಸಾಧನೆ ಸುಲಭ

ಮಡಿಕೇರಿ,ಡಿ.21:- ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (CIT) ಕಾಲೇಜಿನ ಮುಖ್ಯ ಗ್ರಂಥಾಲಯದಲ್ಲಿ IQAC ವತಿಯಿಂದ ಏರ್ಪಡಿಸಲಾದ ಯುಜನತೆಯ ಚಾರಿತ್ರ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾದ “ವಿವೇಕ ಸಂಕಲ್ಪ” ಅಧ್ಯಯನ ವಿಭಾಗವನ್ನು ಪೊನ್ನಂಪೇಟೆಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಬೋಧಾನಂದ ಸ್ವರೂಪ ಸ್ವಾಮಿಜಿಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. ತದನಂತರ ಶ್ರೀಗಳು ಮಾತನಾಡಿ ಪ್ರಸ್ತುತ ಯುವಜನಾಂಗ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ಸಾರುವ ಗ್ರಂಥಗಳ ಅಧ್ಯಯನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು ಹಾಗೂ ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು ಈ ಸಮಯದಲ್ಲಿ ವಿವೇಕಾನಂದರ ಕುರಿತು ಹಲವು ಉಪಯುಕ್ತ ಗ್ರಂಥಗಳನ್ನು ಕಾಲೆÉೀಜಿನ ಗ್ರಂಥಾಲಯಕ್ಕೆ ಕೊಡುಗೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ// ಎಂ. ಬಸವರಾಜ್ ರವರು ಮಾತನಾಡಿ ಅಧ್ಯಯನ ಕೇಂದ್ರವನ್ನು ಕಾಲೇಜಿನ ಗ್ರಂಥಾಲಯದಲ್ಲಿ ಸ್ಥಾಪಿಸಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಯುವಜನತೆಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಕಾಲೇಜಿನ ಆಡಳಿತ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಪ್ರೋ. ರಾಮಕೃಷ್ಣ ಬಿ.ಬಿ. ರವರು ನಿರೂಪಿಸಿದರು. ಶ್ರೀಮತಿ ಗೀತಾ ಕೆ.ಎಂ ರವರು ಪ್ರಾರ್ಥನೆ ನೆರವೇರಿಸಿಕೊಟ್ಟರು ಹಾಗೂ ಗ್ರಂಥಪಾಲಕರಾದ ಶ್ರೀ ಕುಮಾರ್ ಜಿ.ಎನ್‍ರವರು ವಂದಿಸಿದರು.

Latest Indian news

Popular Stories