ಜಿ.ಪಂ. ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರು, ಸದಸ್ಯರು ಆಯ್ಕೆ
ರಾಯಚೂರು,ಅ.05:- 2020ನೇ ಸಾಲಿನ ಮೂರನೇ ಅವಧಿಗೆ ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 186 ಹಾಗೂ ರಾಯಚೂರು ಜಿಲ್ಲಾ ಪಂಚಾಯತಿಯ ವಿ-ನಿಯಮ 2016ರಂತೆ 2020 ಅ.3ರಂದು ಜರುಗಿದ ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ.
ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗೀತಾ ಕರಿಯಪ್ಪ ವಜ್ಜಲ್, ಸದಸ್ಯರುಗಳಾಗಿ ರತ್ನಮ್ಮ ಯಂಕೋಬ ಅರಕೇರಿ, ವಿರುಪಮ್ಮ ತಿಪ್ಪರಾಜು, ಶಾಂತಮ್ಮ ದೇವಿಂದ್ರಪ್ಪ, ಅಮರಮ್ಮ ಅಮರೇಶ ಅವರನ್ನು ಆಯ್ಕೆ ಮಾಡಲಾಗಿದೆ.
ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನೆ ವೀರಲಕ್ಷ್ಮೀ ಪರಮೇಶಪ್ಪ, ಸದಸ್ಯರುಗಳಾಗಿ ವಿಜಯಲಕ್ಷ್ಮೀ, ರೇಣುಕಾ ಚಂದ್ರಶೇಖರ, ಗುಂಡಮ್ಮ ಹನುಮಯ್ಯ, ಎನ್.ಶಿವನಗೌಡ ಶರಣಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎನ್.ಕೇಶವರೆಡ್ಡಿ, ಸದಸ್ಯರುಗಳಾಗಿ ಎನ್. ಶಿವನಗೌಡ ಶರಣೆಗೌಡ, ವಿಜಯಲಕ್ಷ್ಮೀ, ಬಸ್ಸಮ್ಮ ಲಿಂಗಣ್ಣ ದೊಡ್ಡಮನೆ, ಶಿವಜ್ಯೋತಿ ಶ್ರೀನಿವಾಸರೆಡ್ಡಿ, ಗುಂಡಮ್ಮ ಹನುಮಯ್ಯ, ಹೇಮಾವತಿ ಸತೀಶ್ ಕುಮಾರ ಇವರನ್ನು ಆಯ್ಕೆ ಮಾಡಲಾಯಿತು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದುರುಗಪ್ಪ ದುರುಗಮ್ಮ, ಸದಸ್ಯರುಗಳಾಗಿ ಎನ್.ಕೇಶವರೆಡ್ಡಿ, ಅಮರೇಗೌಡ ಶರಣಗೌಡ ಮಾಲಿಪಾಟೀಲ್, ಕೆ. ಪದ್ಮಾವತಿ, ರೂಪಾ ಸಿದ್ಧಲಿಂಗಪ್ಪ, ರತ್ನಮ್ಮ ಯಂಕೋಬ ಅರಕೇರಿ, ಅಮರಮ್ಮ ಅಮರೇಶ ಇವರನ್ನು ಆಯ್ಕೆ ಮಾಡಲಾಯಿತು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಿ.ಶಿವಜ್ಯೋತಿ ಶ್ರೀನಿವಾಸ ರೆಡ್ಡಿ, ಸದಸ್ಯರುಗಳಾಗಿ ರೇಣುಕಾ ಚಂದ್ರಶೇಖರ, ಹಂಪನಗೌಡ ಮಲ್ಲನಗೌಡ, ರೂಪಾ ಸಿದ್ಧಲಿಂಗಪ್ಪ, ವಿರುಪಮ್ಮ ತಿಪ್ಪರಾಜು, ವೀರಣ್ಣ ಪಾಣಿ ಹಾಗೂ ಶಾಂತಮ್ಮ ದೇವಿಂದ್ರಪ್ಪ ಇವರನ್ನು ಆಯ್ಕೆ ಮಾಡಲಾಗಿದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




