ಆ್ಯಸಿಡ್ ದಾಳಿ ಪ್ರಕರಣ: ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲು ಎಸ್.ಐ.ಓ ಆಗ್ರಹ

SIO ದಕ್ಷಿಣ ಕನ್ನಡದ ನಿಯೋಗ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಶ್ರೀ ದಿನೇಶ್ ಗುಂಡೂ ರಾವ್ ಅವರನ್ನು ಕಡಬದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಾಯಿತು.

ಕಡಬದಲ್ಲಿ ನಡೆದ ಆಸಿಡ್ ದಾಳಿಯ ಭಯಾನಕತೆ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲ ಎಂಬುದಕ್ಕೆ ಕೈಗನ್ನಡಿ. ಆದ್ದರಿಂದ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭದ್ರತೆಯನ್ನು ಪರಿಶೀಲಿಸಬೇಕು.
ಕಡಬದಲ್ಲಿ ನಡೆದ ಘಟನೆ ಮುಂದೆಂದೂ ನಡೆಯದಂತೆ ಭದ್ರತೆಯನ್ನು ನೀಡಬೇಕು. ಮಕ್ಕಳ ಕಲ್ಯಾಣ ಇಲಾಖೆಗಳ ಮೂಲಕ ವಿದ್ಯಾರ್ಥೀಗಳಿಗೆ ವಿಸ್ತೃತ ಯೋಜನೆ ಸ್ಥಾಪಿಸುವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನಿರಿಸಿದರು.

ನಿಯೋಗದಲ್ಲಿ ಶಾಹಿಲ್ ಕೆಸಿ ಮೊಹಮ್ಮದ್ ಹಯ್ಯನ್, ಮತ್ತು ಮುಸ್ತಫಾ ಉಪಸ್ಥಿತರಿದ್ದರು.

Latest Indian news

Popular Stories