ಬಂಟ್ವಾಳ: ಅಂಬ್ಯುಲೆನ್ಸ್ ಪಲ್ಟಿ – ಚಾಲಕ ಮೃತ್ಯು

ಬಂಟ್ವಾಳ: ರೋಗಿಯೋರ್ವನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು‌ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.18ರ ಶುಕ್ರವಾರ ನಡೆದಿದೆ.

ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟ ಚಾಲಕ.

ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಾರ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದ.

ಈತನ ಸಹಿತ ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗಿತ್ತು. ಆದರೆ ಚಾಲಕ ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟ ಬಗ್ಗೆ ಆಸ್ಪತ್ರೆಯ ಮೂಲಗಳು ಪೊಲೀಸರಿಗೆ ಮಾಹಿತಿ ನೀಡಿದೆ.

ಅಂಬ್ಯುಲೆನ್ಸ್ ವಾಹನದಲ್ಲಿದ್ದ ರೋಗಿಯ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ಇನ್ನಷ್ಟೇ ತಿಳಿದು ಬರಬೇಕಿದೆ.

Latest Indian news

Popular Stories