Dakshina Kannada

ಬೈಕಂಪಾಡಿ: ಟ್ಯಾಂಕರ್ ಮೇಲೆ ವೆಲ್ಡಿಂಗ್ ಮಾಡುತ್ತಿದ್ದಾಗ ಆಕಸ್ಮಿಕ ಬೆಂಕಿ ತಗುಲಿ ಕಾರ್ಮಿಕ ಮತ್ಯು

ಮಂಗಳೂರು: ಟ್ಯಾಂಕರ್ ಮೇಲೆ ಕುಳಿತು ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಉಂಟಾದ ಆಕಸ್ಮಿಕ ಬೆಂಕಿಯಿಂದ ಕಾರ್ಮಿಕ ಮತಪಟ್ಟ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.

ರೊನಾಲ್ಡ್ ಪೌಲ್(64) ಘಟನೆಯಲ್ಲಿ ಮತ ಕಾರ್ಮಿಕ. ಅವರು ಶನಿವಾರ ಸಂಜೆ ಬೈಕಂಪಾಡಿ ಜೋನ್ಸ್ ಪೆಟ್ರೋ ಕೆಮಿಕಲ್ ಪ್ರೆೃವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಇತರ 6 ಮಂದಿ ಕಾರ್ಮಿಕರೊಂದಿಗೆ ಖಾಲಿ ಟ್ಯಾಂಕರ್ ಮೇಲೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಟ್ಯಾಂಕರ್‌ಗೆ ಬೆಂಕಿ ಆವರಿಸಿದ ಪರಿಣಾಮ ರೊನಾಲ್ಡ್ ಪೌಲ್ ಸುಟ್ಟ ಗಾಯಗಳೊಂದಿಗೆ ಟ್ಯಾಂಕರ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ಸುಮಾರು 20 ಅಡಿ ಕೆಳಗೆ ಬಿದ್ದ ಪರಿಣಾಮವಾಗಿ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ವೇಳೆ ಇತರ ಕಾರ್ಮಿಕರು ಕೆಳಗಡೆ ಇದ್ದುದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button