ಭರತ್ ಶೆಟ್ಟಿ ಸಂಸ್ಕಾರವಿಲ್ಲದ ಶಾಸಕ: ಐವನ್ ಡಿಸೋಜಾ

ಮಂಗಳೂರು: ಭರತ್ ಶೆಟ್ಟಿ ಶಾಸಕನಾಗಲು ಅಯೋಗ್ಯನಾಗಿದ್ದು, ಅವರೊಬ್ಬರು ಸಂಸ್ಕಾರವಿಲ್ಲದ ವ್ಯಕ್ತಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಕುರಿತ ವಿವಾದಾತ್ಮಕ ಹೇಳಿಕೆ ಖಂಡಿಸಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೂಲ ವೃತ್ತಿಯಾದ ವೈದ್ಯಕೀಯ ಕ್ಷೇತ್ರಕ್ಕೇ ಭರತ್ ಶೆಟ್ಟಿ ಅಪಮಾನ ಎಂದು ಹೇಳಿದರು.


ತಮ್ಮ ಭಾಷಣದಲ್ಲಿ ಶಸ್ತ್ರಾಸ್ತ್ರಗಳನ್ನು ತೆಗೆಯುವ ಬಗ್ಗೆ ಮಾತನಾಡಿದ್ದರು.‌ ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ಕೊಡುವುದು ಅಪರಾಧವಾಗಿದ್ದು, ನಗರ ಪೊಲೀಸ್ ಆಯುಕ್ತರು ಭರತ್ ಶೆಟ್ಟಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಬೇಕು ಎಂದರು.


ಶಾಸಕನಿಗೆ ಸಮಾಜದಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತದೆ. ಆದರೆ ಭರತ್ ಶೆಟ್ಟಿ ತನ್ನೆಲ್ಲಾ ಜವಾಬ್ದಾರಿಗಳನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಐವನ್ ಡಿಸೋಜಾ ಆರೋಪಿಸಿದರು.


ತಮ್ಮ ಕುರ್ಚಿ, ಅಧಿಕಾರಕ್ಕೆ ಸಂಚಕಾರ ಬಂದಾಗ ಕೋಮುವಾದದ ಮೊರೆ ಹೋಗುವುದು ಬಿಜೆಪಿಯ ವಾಡಿಕೆ. ಈಗ ಸೋಲುವ ಭಯದಲ್ಲಿ ಅದೇ ಚಾಳಿಯನ್ನು ಬಿಜೆಪಿ ನಾಯಕರು ಮುಂದುವರಿಸಿದ್ದಾರೆ. ಇದರಿಂದ ಸಮಾಜಕ್ಕೆ ಹಾನಿಯೇ ಹೊರತು ಲಾಭವೇನೂ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಂ ಜಿ ಹೆಗ್ಡೆ, ಮಾಜಿ ಮೇಯರ್ ಗಳಾದ ಎಂ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಹರೀನಾಥ್ ಕೆ, ಬ್ಲಾಕ್ ಅಧ್ಯಕ್ಷರು ಗಳು ಪ್ರಕಾಶ್ ಸಾಲಿಯಾನ್, ಸುರೇಂದ್ರ ಕಾಂಬ್ಳಿ, ಜೆ ಅಬ್ದುಲ್ ಸಲೀಂ, ಬೇಬಿ ಕುಂದರ್ ಅಪ್ಪಿಲತಾ, ಟಿ ಹೊನ್ನಯ್ಯ, ಸುಹಾನ್ ಆಳ್ವಾ, ಭಾಸ್ಕರ್ ರಾವ್, ಶುಭೋದಯ ಆಳ್ವಾ ಉಪಸ್ಥಿತರಿದ್ದರು

Latest Indian news

Popular Stories