
ದ.ಕ. ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯ ಒಟ್ಟು ಮತದಾರರು ಎಷ್ಟು ಗೊತ್ತಾ?
ಮಂಗಳೂರು: ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಮತದಾರರ ನೋಂದಣಾಧಿಕಾರಿಗಳ ಕಚೇರಿ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 17,88,405 ಮಂದಿ ಮತದಾರರ ಪಟ್ಟಿಯಲ್ಲಿ ಇದ್ದಾರೆ.
ನೂತನ ಮತದಾರರ ಪಟ್ಟಿ ಈ ರೀತಿ ಇದೆ:
1) ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2024ರಲ್ಲಿ ಮತದಾರರ ಒಟ್ಟು ಸೇರ್ಪಡೆ – 27,440, ಮತದಾರರ ಪಟ್ಟಿಯಿಂದ ತೆಗೆದುಹಾಕಿರುವವರು ಒಟ್ಟು-24,870, ತಿದ್ದುಪಡಿ ಮಾಡಿರುವ ಒಟ್ಟು ಮತದಾರರು-15,961.
2) ದಿನಾಂಕ:22-01-2024ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿ- ಗಂಡು-8,73,277, ಹೆಣ್ಣು-9,15,058, ತೃತೀಯ ಲಿಂಗ-70 ಒಟ್ಟು
17,88,405.
3) ಮತದಾರರ ಪಟ್ಟಿಯಲ್ಲಿರುವ ಯುವ (18ರಿಂದ 19 ವರ್ಷ) ಮತದಾರರ ವಿವರ:
ಗಂಡು-17,180 ಹೆಣ್ಣು-16,362, ತೃತೀಯ ಲಿಂಗ-3 ಒಟ್ಟು 33,545.
4) ಅಂಗವಿಕಲ ಮತದಾರರ ವಿವರ: ಗಂಡು-7,902, ಹೆಣ್ಣು-5,851, ತೃತೀಯ ಲಿಂಗ-2 ಒಟ್ಟು 13,755.
5) ಅನಿವಾಸಿ ಭಾರತೀಯ ಮತದಾರರ ವಿವರ: ಗಂಡು-182, ಹೆಣ್ಣು-51, ಒಟ್ಟು 233.




