ಉಳ್ಳಾಲ: ಕಲ್ಲಡ್ಕ ಪ್ರಭಾಕರ್ ಭಟ್ಟನ ದ್ವೇಷ ಭಾಷಣದ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್.ಐ.ಆರ್ ದಾಖಲಿಸಿದ್ದನ್ನು ಖಂಡಿಸಿ ಡಿವೈಎಫ್’ಐ ನಿಂದ ಉಳ್ಳಾಲ ಠಾಣಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
“ಪೊಲೀಸರು ಆರ್.ಎಸ್.ಎಸ್ ಮತ್ತು ಶಾಸಕರ ಅಣತಿಯಂತೆ ವರ್ತಿಸುತ್ತಿದ್ದಾರೆ” ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ಠಾಣೆಯೊಳಗೆ ಪ್ರವೇಶಿಸದಂತೆ ತಡೆದರು.
ಮಾಸ್ತಿಕಟ್ಟೆಯಿಂದ ಠಾಣೆಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಮುತ್ತಿಗೆ ಯತ್ನ ನಡೆಸಿದರು.