ಮಂಗಳೂರು, ಸೆ.16: ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ಸೆಪ್ಟೆಂಬರ್ 16 ರ ಸೋಮವಾರದಂದು ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸಿದರು.
ಪ್ರವಾದಿಯವರ ಜೀವನ, ಬೋಧನೆಗಳು, ತ್ಯಾಗಗಳನ್ನು ಗೌರವಿಸಲು ಈ ಸಂದರ್ಭವನ್ನು ಆಚರಿಸಲಾಗುತ್ತದೆ. ಅವರು ತಮ್ಮ ಶತ್ರುಗಳಿಗೂ ಸಹ ಕರುಣೆ ತೋರುವಲ್ಲಿ ಹೆಸರುವಾಸಿಯಾಗಿದ್ದರು.
ಸೋಮವಾರ ಬೆಳಿಗ್ಗೆ, ಈ ಸಂದರ್ಭವನ್ನು ಸ್ಮರಿಸಲು ಮುಸ್ಲಿಮರು ಮಿಲಾದ್ ಮೆರವಣಿಗೆ ನಡೆಸಿದರು.