ಮಂಗಳೂರು: ಹೆಡ್ ಕಾನ್‌ಸ್ಟೆಬಲ್ ಅಮಾನತು

ಮಂಗಳೂರು, ಮಾ.3: ಕರ್ತವ್ಯಲೋಪ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀಲತಾ ಅವರನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಲತಾ ಅವರು ನಗರದ ಗಡಿಯಾರ ಕಂಬದ ಬಳಿ ಹೊಯ್ಸಳ ಗಸ್ತು ವಾಹನದಲ್ಲಿ ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದರು. ಆಕೆ ಕರ್ತವ್ಯ ನಿಮಿತ್ತ ಖಾಸಗಿ ವಾಹನದಲ್ಲಿ ಹೋಗಿದ್ದು, ಇದು ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ.

ಈ ಸಂಬಂಧ ಫೆ.23ರಂದು ನಗರ ಪೊಲೀಸ್ ಆಯುಕ್ತರಿಗೆ ದೂರು ಬಂದಿದ್ದು, ಡಿಸಿಪಿ ಅಂಶುಕುಮಾರ್ ನೀಡಿದ ಮಾಹಿತಿಯಂತೆ ಫೆಬ್ರವರಿ 28ರಿಂದ ವಿಚಾರಣೆ ಬಾಕಿಯಿದ್ದು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

Latest Indian news

Popular Stories