Dakshina Kannada

ಹಾಸಿಗೆ ಪೀಡಿತರಿಗೆ ಮನರಂಜನಾ ಪ್ರವಾಸ: ಮಂಗಳೂರಿನಲ್ಲೊಂದು ವಿಭಿನ್ನ ಪ್ರಯತ್ನ

ವರದಿ: ಮಂಗಳೂರು ಪ್ರತಿನಿಧಿ

ಮಂಗಳೂರು: ಆರೋಗ್ಯದ ಸಮಸ್ಯೆ ಇರುವವರಿಗೆ ಆರ್ಥಿಕ ನೆರವು, ಅಗತ್ಯ ಸಾಧನಗಳ ಪೂರೈಕೆ ಮೊದಲಾದ ಸೇವೆಗಳನ್ನು ಸಾಮಾನ್ಯವಾಗಿ ಹೆಚ್ಚಿನ ಸಂಘ ಸಂಸ್ಥೆಗಳು ಮಾಡುತ್ತಿದೆ. ಆದರೆ ಮಂಗಳೂರಿನಲ್ಲೊಂದು ಸರಕಾರೇತರ ಸಂಸ್ಥೆ (NGO) ಹಾಸಿಗೆ ಪೀಡಿತರನ್ನು ಒಂದು ದಿನದ ಮನರಂಜನಾ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

IMG 20231105 WA0025 Dakshina Kannada
ಕಳೆದ 5 ವರ್ಷಗಳಿಂದ ಮಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ‘ಕೋಸ್ಟಲ್ ಫ್ರೆಂಡ್ಸ್’ ಎಂಬ ಸಮಾನ ಮನಸ್ಕ ಯುವಕರ ತಂಡ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಹಲವು ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ ಹಾಸಿಗೆ ಪೀಡಿತರಾಗಿರುವ ರೋಗಿಗಳನ್ನು ಆದಿತ್ಯವಾರ ಒಂದು ದಿನದ ಪ್ರವಾಸಕ್ಕೆ ಕರೆದೊಯ್ಯಲಾಗಿದೆ.

ಒಟ್ಟು ಆರು ಮಂದಿ ಹಾಸಿಗೆ ಪೀಡಿತರು ಈ ಪ್ರವಾಸದ ಪ್ರಯೋಜನ ಪಡೆದಿದ್ದಾರೆ.

ಮಂಗಳೂರಿನಿಂದ ಪ್ರಾರಂಭಗೊಂಡ ಆರು ಮಂದಿ ಆಶಕ್ತರನ್ನೊಳಗೊಂಡ ಈ ಪ್ರವಾಸವು ಮೊದಲು ಪಿಲಿಕುಳ ನಿಸರ್ಗಧಾಮಕ್ಕೆ ತೆರಳಿದೆ. ಅಲ್ಲಿ ಸರೋವರ ಉದ್ಯಾನವನ, ಗುತ್ತಿನ ಮನೆ ಬಳಿಕ ಮೃಗಾಲಯಕ್ಕೆ ಅವರನ್ನು ಕರೆದೊಯ್ಯಲಾಯಿತು. ಅಲ್ಲಿಂದ ತನ್ನೀರುಬಾವಿ ಬೀಚ್ ಮತ್ತು ಸಂಜೆ ಮಾಲ್ ಒಂದಕ್ಕೆ ಕರೆದುಕೊಂಡು ಹೋಗಿ ಅವರನ್ನು ಖುಷಿ ಪಡಿಸಲಾಯಿತು.

‘ಕೋಸ್ಟಲ್ ಫ್ರೆಂಡ್ಸ್’ ತಂಡದ ಸದಸ್ಯರ ಜೊತೆಗೆ ವೈದ್ಯಕೀಯ ತಂಡವೂ ಹಾಸಿಗೆ ಪೀಡಿತರಿಗೆ ನೆರವಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button