Mangaluru | ಮರಣ ದೃಢೀಕರಣ ಪತ್ರಕ್ಕೆ ಲಂಚ: ಗ್ರಾಮ‌ಕಣಿಕ ಲೋಕಾಯುಕ್ತ ಬಲೆಗೆ

ಮಂಗಳೂರು: ಮರಣ ದೃಢೀಕರಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ‌ಕರಣಿಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳೂರಿನ ಚೇಳಾಯೂರು ಗ್ರಾಮ‌ ಪಂಚಾಯತ್‌ನಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ‌ ಚೇಳಾಯೂರು ಗ್ರಾಮ ಪಂಚಾಯತ್‌ನ ವಿ.ಎ. ವಿಜಿತ್ ಲೋಕಾಯುಕ್ತ ಬಲೆಗೆ ಬಿದ್ದವರು.

ದುರುದಾರರಿಗೆ ಆಸ್ತಿ ಮಾರಾಟ ಸಂಬಂಧ ತನ್ನ ಅಜ್ಜನ ಮರಣ ದೃಢೀಕರಣ ಪತ್ರ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಮರಣ ದೃಢೀಕರಣ ಪತ್ರಕ್ಕಾಗಿ ಚೇಳಾಯೂರು ಗ್ರಾಪಂ ಕರಣಿಕರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ ವಿಎ ದೃಢೀಕರಣ ಪತ್ರ ನೀಡದೇ ಸತಾಯಿಸಿದ್ದು, ಕೇಳಿದಾಗ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅಲ್ಲದೇ ಮರಣ ದೃಢೀಕರಣ ಪತ್ರ ಸಿದ್ಧವಾದಾಗ 15 ಸಾವಿರ ರುಪಾಯಿ ಲಂಚ ಕೇಳಿದ್ದು, ಅಷ್ಟು ಹಣ ಇಲ್ಲ ಎಂದಾಗ 13 ಸಾವಿರ ರುಪಾಯಿ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಅದರಂತೆ ಹಣ ಪಡೆಯುವಾಗ ಗ್ರಾಮ‌ ಕರಣಿಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಹಣವನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿಎ ಸೈಮನ್ ತಿಳಿಸಿದ್ದಾರೆ.

Latest Indian news

Popular Stories