ಮಂಗಳೂರು: ಬಸ್‌ನಿಂದ ಬಿದ್ದು ಮಹಿಳೆ ಮೃತ್ಯು

ಮಂಗಳೂರು: ಚಲಿಸುತ್ತಿದ್ದ ಬಸ್‌ನಿಂದ ಹೊರಗೆಸೆಯಲ್ಪಟ್ಟು ಮಹಿಳೆಯೋರ್ವರು ಮೃತಪಟ್ಟ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.

ಈರಮ್ಮ (65) ಮೃತ ಮಹಿಳೆ. ಈರಮ್ಮ ತನ್ನ ಮಗಳೊಂದಿಗೆ ಖಾಸಗಿ ಬಸ್‌ನಲ್ಲಿ ಸುರತ್ಕಲ್‌ಗೆ ಹೋಗುತ್ತಿದ್ದರು. ಜೋಕಟ್ಟೆ ಕ್ರಾಸ್‌ಬಳಿ ಚಾಲಕ ಏಕಾ ಏಕಿ ಬ್ರೇಕ್ ಹಾಕಿದ್ದು, ಡ್ರೈವರ್ ಹಿಂಬದಿ ಕೂತಿದ್ದ ಈರಮ್ಮ ಹೊರಗೆ ಎಸೆಯಲ್ಪಟ್ಟಿದ್ದಳು. ಅದೇ ವೇಳೆ ಬಸ್‌ನ ಹಿಂಭಾಗದ ಚಕ್ರ ಈರಮ್ಮ ಮೇಲೆ ಹಾದು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories