Dakshina KannadaFeatured Story

ಮುಂದುವರಿದ ಅನೈತಿಕ ಪೊಲೀಸ್’ಗಿರಿ: ವರದಿಗಾರನ ಮೇಲೆ ಹಲ್ಲೆ!

ಮಂಗಳೂರು: ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಗ್ಗೆ ವರದಿಯಾಗಿದ್ದು, ಮುಸ್ಲಿಮ್ ಎಂದು ಭಾವಿಸಿ ವರದಿಗಾರನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ.

ಅಭಿಜಿತ್ ಕೊಲ್ಪೆ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕಾವೂರು ರೆಸ್ಟೋರೆಂಟ್ ನಲ್ಲಿ ಸ್ನೇಹಿತೆ ಜೊತೆ ಊಟಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಗೊಳಪಡಿಸಿದ್ದಾರೆ. ಜು. 28ರಂದು ಎಫ್‌ ಐಆರ್ ದಾಖಲಾಗಿದೆ.

ಬಳಿಕ ಪ್ರಕರಣದ ಆರೋಪಿ, ಕೋಟೆಕಾರ್ ನಿವಾಸಿ ಚೇತನ್, ಯೆಯ್ಯಡಿ ನವೀನ್ ಎಂಬಾತನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button