ಮೂಡಬಿದರೆ ಪೇಟೆಯಲ್ಲಿ ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಾನೆ ಎಂಬ ನೆಪದಲ್ಲಿ ಮುಸ್ಲಿಂ ವಿದ್ಯಾರ್ಥಿ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ನಡೆಸಿರುವುದನ್ನು ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ತೀವ್ರವಾಗಿ ಖಂಡಿಸಿದ್ದಾರೆ.
ಕಾನೂನನ್ನು ಕೈಗೆತ್ತಿಕೊಂಡು ಕೆಲವು ಸಂಘಪರಿವಾರದ ಗೂಂಡಾಗಳು ಅನೈತಿಕ ಪೋಲೀಸ್ ಗಿರಿ ಎಂಬ ನೆಪದಲ್ಲಿ ಹಲ್ಲೆ ನಡೆಸುವುದು ಈಗ ಜಿಲ್ಲೆಯಲ್ಲಿ ತೀರಾ ಸಾಮಾನ್ಯವಾಗಿ ಬಿಟ್ಟಿದೆ, ಇಂತವರಿಗೆ ಕಾನೂನಿನ ಮೇಲೆ ಭಯವಿಲ್ಲ ಎಂದರೆ ಪೋಲೀಸ್ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯ ಗೊಂಡಿದ್ದು ಹೀಗಾದರೆ ಪೋಲೀಸರಿಂದ ಕಾನೂನನ್ನು ಕಾಪಾಡಲು ಸಾಧ್ಯವಿದೆಯೇ ಎಂದು ಅವರು ಕಿಡಿಕಾರಿದರು.
ನೈತಿಕ ಪೋಲೀಸ್ ಗಿರಿ ನಡೆಸಿದ ಗೂಂಡಾಗಳನ್ನು ಗೂಂಡಾ ಕಾಯ್ದೆ ಸೆಕ್ಷನ್ ಅಡಿಯಲ್ಲಿ ಬಂಧಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಕಾನೂನನ್ನು ಕೈಗೆತ್ತಿಗೊಂಡರೆ ಅಥವಾ ಪೋಲೀಸರು ಕಂಡು ಕಾಣದಂತೆ ನಟಿಸಿದರೆ ಸಮಾನ ಮನಸ್ಕರನ್ನು ಸೇರಿಸಿಕೊಂಡು ತೀವ್ರ ಹೋರಾಟವನ್ನು ನಡೆಸಬೇಕಾಗಬಹುದೆಂದು ಎಚ್ಚರಿಕೆಯನ್ನು ನೀಡಿದರು.