ಮಂಗಳೂರು: ಇಲ್ಲಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಗ್ರಾಮದ ಓರ್ವ ಯುವತಿ ಮತ್ತು ಆಪ್ರಾಪ್ತ ಬಾಲಕಿ ಸೇರಿ ಇಬ್ಬರು ನಾಪತ್ತೆಯಾಗಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ಪಡುಪಣಂಬೂರು ಬೆಳ್ಳಾಯರು
ಗ್ರಾಮದ ಕೊರ್ದಬ್ಬು ದೈವಸ್ಥಾನದ ಬಳಿಯ ವಾಸವಾಗಿದ್ದ
ಹಸೀನಾ (25 ) ಮತ್ತು ಆಕೆಯ ಜೊತೆಗಿದ್ದ ರಾಜಸ್ಥಾನ
ಮೂಲದ 17ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಎಂದು
ತಿಳಿದು ಬಂದಿದೆ.
ನಾಪತ್ತೆಯಾಗಿರು ಹಸೀನಾ ಅವರು 5 ಅಡಿ ಎತ್ತರ, ಎಣ್ಣೆ
ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ.
ನಾಪತ್ತೆಯಾಗಿದ್ದ ಸಂದರ್ಭ ಕೆಂಪು ಬಣ್ಣದ ಚೂಡಿದಾರ
ಧರಿಸಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ.
ಅಪ್ರಾಪ್ತ ವಯಸ್ಸಿನ ಬಾಲಕಿ 5.1 ಅಡಿ ಎತ್ತರವಿದ್ದು, ಎಣ್ಣೆ
ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದಾರೆ.
ನಾಪತ್ತೆಯಾಗುವಾಗ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್
ಧರಿಸಿದ್ದು, ಕನ್ನಡ ಮತ್ತು ಮಾರ್ವಾಡಿ ಭಾಷೆ
ಮಾತನಾಡುತ್ತಾರೆ. ಇವರ ಪತ್ತೆಯಾದಲ್ಲಿ ಮೂಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.