ಮಂಗಳೂರು: ತಟ್ಟೆ ತೊಳೆಯುವ ವಿಚಾರದಲ್ಲಿ ಗಲಾಟೆ; ಕೊಲೆಯಲ್ಲಿ ಅಂತ್ಯ

ಬಜಪೆ: ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಕೊಸ್ಟಲ್‌ ಗಾರ್ಡ್‌ ಸೈಟ್‌ನಲ್ಲಿ ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ನಡೆದ ಗಲಾಟೆ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಉತ್ತರ ಭಾರತ ಮೂಲದ ಸಂಜಯ್‌ ಮೃತ ಕೂಲಿ ಕಾರ್ಮಿಕ. ಸಂಜಯ್‌ ಮತ್ತು ಉತ್ತರ ಭಾರತ ಮೂಲದವನೇ ಆದ ಸೊಹಾನ್‌ ಯಾದವ್‌ (19) ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಸೊಹನ್‌ ಯಾದವ್‌ ಸಂಜಯ್‌ನನ್ನುಬಲವಾಗಿ ನೆಲಕ್ಕೆ ದೂಡಿದ್ದ. ಈ ಪರಿಣಾಮ ಸಂಜಯ ಹಿಮ್ಮುಖವಾಗಿ ಬಿದ್ದು, ತಲೆಗೆ ಗಂಭೀರವಾದ ಗಾಯವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಮಾ. 5ರಂದು ರಾತ್ರಿ 8.30ಕ್ಕೆ ನಡೆದಿತ್ತು.

ಈ ಘಟನೆ ನಡೆದ ಬಳಿಕ ಪರಾರಿಯಾಗಿದ್ದ ಆರೋಪಿ ಸೋಹನ್‌ ಯಾದವ್‌ನನ್ನು ಮಾ. 7ರಂದು ಮಧ್ಯಾಹ್ನ 1ಗಂಟೆಯ ವೇಳೆಗೆ ಮಂಗಳೂರು ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆಯುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ರವರ ಮಾರ್ಗದರ್ಶನದಂತೆ, ಡಿಸಿಪಿ ಯವರಾದ ಅಂಶು ಕುಮಾರ್‌ (ಕಾಮತ್ತು ಸು) ದಿನೇಶ್‌ ಕುಮಾರ್‌ (ಅ ಮತ್ತು ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್‌ , ಪಿ.ಸ್‌.ಐ. ಗುರು ಕಾಂತಿ, ಪೂವಪ್ಪ, ಎ.ಎಸ್‌.ಐ. ರಾಮ ಪೂಜಾರಿ, ಮತ್ತು ಹೆಚ್‌ ಸಿ. ಗಳಾದ ಪುರುಷೋತ್ತಮ, ಸಂತೋಷ್‌ ಡಿ.ಕೆ. ಮಹೇಶ್‌, ಸುಜನ್‌, ರಾಜೇಶ್‌, ರಶೀದ್‌, ಹಾಗೂ ಸಂಜೀವ ಭಜಂತ್ರಿ, ಪ್ರೇಮ್‌ ಕುಮಾರ್‌, ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Latest Indian news

Popular Stories