ಗುರುಪುರ ಗ್ರಾಮ ಪಂಚಾಯತ್ SDPI ತೆಕ್ಕೆಗೆ

ಮಂಗಳೂರು ಅ 9: ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ಇಂದು ನಡೆಯಿತು ಗುರುಪುರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ SDPI ಬೆಂಬಲಿತ ಅಭ್ಯರ್ಥಿ ಸಫಾರ ನಾಸೀರ್ ಮತ್ತು ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ದಾವೂದ್ ಆಯ್ಕೆಯಾದರು

ಗುರುಪುರ ಗ್ರಾಮ ಪಂಚಾಯತ್ ಒಟ್ಟು 28 ಸ್ಥಾನಗಳಲ್ಲಿ SDPI ಬೆಂಬಲಿತ 10 ಸದಸ್ಯರು ಕಾಂಗ್ರೆಸ್ ಬೆಂಬಲಿತ 11 ಸದಸ್ಯರಲ್ಲಿ 2 ಮಂದಿ ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಬಿಜೆಪಿ ಸದಸ್ಯರು ಸಂಖ್ಯೆ 8 ಕ್ಕೆ ಏರಿದೆ ಒರ್ವ ಪಕ್ಷೇತರ ಸದಸ್ಯ ಇರುವ‌ ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಚುನಾವಣೆಯಲ್ಲಿ ಒರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ SDPI ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಿತು

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ SDPI ಬೆಂಬಲಿತ ಅಭ್ಯರ್ಥಿ ಸಫಾರ 11 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೋಭಾ 9 ಮತಗಳು

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ದಾವೂದ್ 11 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಕೆ.ಅಶ್ರಫ್ 9 ಮತಗಳನ್ನು ಪಡೆದರು ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದರು

Latest Indian news

Popular Stories