Dakshina KannadaCrime

ಉಳ್ಳಾಲ: ಚೂರಿಯಿಂದ ಇರಿದು ಗುಜರಿ ವ್ಯಾಪಾರಿಯ ಕೊಲೆ ಯತ್ನ

ಉಳ್ಳಾಲ: ಗುಜುರಿ ವ್ಯಾಪಾರಿಯ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ನಡೆದಿದೆ.

ಪಂಜಿಮೊಗರು ನಿವಾಸಿ ಹಮೀದ್ ಚೂರಿ ಇರಿತಕ್ಕೊಳಗಾದವರು. ಉಳ್ಳಾಲ ನಗರಸಭೆ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮಹಮ್ಮದ್ ಜಾವೇದ್ ಚೂರಿಯಿಂದ ಇರಿದ ಆರೋಪಿ ಎನ್ನಲಾಗಿದೆ. ಚೂರಿ ಇರಿತಕ್ಕೊಳಗಾದ ಹಮೀದ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಣ ಕಾಸಿ ವಿಚಾರವಾಗಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಹಮೀದ್, ದಶಕದ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಪಂಜಿಮೊಗರು ತಾಯಿ – ಮಗಳ ಜೋಡಿ ಕೊಲೆ ಪ್ರಕರಣದ ಮಹಿಳೆಯ ಪತಿ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button