ಉಳ್ಳಾಲ: ಎರಡು ಮಕ್ಕಳೊಂದಿಗೆ ವಿವಾಹಿತ‌ ಮಹಿಳೆ ನಾಪತ್ತೆ

ಮಂಗಳೂರು : ಉಳ್ಳಾಲ ಗ್ರಾಮದ ತೊಕ್ಕೊಟ್ಟು ನಿವಾಸಿ ಮಂಜುಳಾ (31) ಎಂಬಾಕೆ ಜು. 31ರಂದು ತನ್ನ ಇಬ್ಬರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವುದಾಗಿ ಹೇಳಿ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆ ಕಪ್ಪು ಮೈಬಣ್ಣದ, ಕೋಲು ಮುಖದ ಈಕೆ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆಯು ತನ್ನ 8ರ ಹರೆಯದ ಮಗ ಕೃಷ್ಣ ಮತ್ತು 6 ವರ್ಷ ಪ್ರಾಯದ ಖುಷಿಯೊಂದಿಗೆ ನಾಪತ್ತೆಯಾಗಿದ್ದಾರೆ.

ಕೃಷ್ಣ ಮೂರುವರೆ ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆ ತಿಳಿದಿದೆ. 3 ಅಡಿ ಎತ್ತರದ ಖುಷಿ ಸಾಧಾರಣ ಶರೀರ, ಗೋದಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ತಿಳಿದಿದೆ. ಕಾಣೆಯಾದ ದಿನ ಮಕ್ಕಳಿಬ್ಬರೂ ಶಾಲಾ ಸಮವಸ್ತ್ರ ಧರಿಸಿದ್ದರು.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಮ್ (0824-2220800) ಉಳ್ಳಾಲ ಠಾಣೆ (0824-2466269) ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Latest Indian news

Popular Stories