ದಾವಣಗೆರೆ: ಜೋಕಾಲಿ ಆಡುವಾಗ ಹಗ್ಗಕ್ಕೆ ಕುತ್ತಿಗೆ ಸಿಲುಕಿ ಬಾಲಕ ಸಾವು

ದಾವಣಗೆರೆ : ಜೋಕಾಲಿ ಆಡುವಾಗ ಹಗ್ಗ ಸಿಲುಕಿ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ನಡೆದಿದೆ.

ಮೃತನನ್ನು 13 ವರ್ಷದ ಬಾಲಕ ಕೊಟ್ರೇಶ್ ಎಂದು ಗುರುತಿಸಲಾಗಿದೆ. ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.

ಶಾಲೆ ಮುಗಿಸಿ ಮನೆಗೆ ಬಂದು ಜೋಕಾಲಿ ಆಡುತ್ತಿದ್ದಾಗ ಈ ಘಟನೆ ನಡೆದಿದೆ.ಬಾಲಕ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದನು. ಫೆ.21 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories