Davanagere

ಧರ್ಮಸ್ಥಳ ಪ್ರಕರಣ; ಎಸ್‌ಐಟಿ ವರದಿ ಬರುವವರೆಗೂ ಯಾವುದೇ ಹೇಳಿಕೆ ಕೊಡಲು ಸಾಧ್ಯವಿಲ್ಲ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುವ ಸಂದರ್ಭದಲ್ಲಿ ಏನೇ ಹೇಳಿಕೆ ನೀಡಿದರೂ ಅದು ಸಬ್ ಜ್ಯೂಡಿಸ್ ಆಗುತ್ತದೆ. ತನಿಖೆ ವರದಿ ಬಂದ ಮೇಲೆಯೇ ನಾವು ಏನಾದರೂ ಕೂಡ ಹೇಳ ಬಹುದು ಎಂದರು.

ದಾವಣಗರೆ: ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣ ಕುರಿತು ಎಸ್‌ಐಟಿ ಅಧಿಕಾರಿಗಳು ಹೋಗಿ ತನಿಖೆ ಪ್ರಾರಂಭ ಮಾಡಿದ್ದಾರೆ. ವರದಿ ಬರುವವರೆಗೂ ನಾವ್ಯಾರೂ ಕೂಡ ಯಾವುದೇ ಹೇಳಿಕೆ ಕೊಡುವುದಕ್ಕೆ ಸಾಧ್ಯ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವಿವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುವ ಸಂದರ್ಭದಲ್ಲಿ ಏನೇ ಹೇಳಿಕೆ ನೀಡಿದರೂ ಅದು ಸಬ್ ಜ್ಯೂಡಿಸ್ ಆಗುತ್ತದೆ. ತನಿಖೆ ವರದಿ ಬಂದ ಮೇಲೆಯೇ ನಾವು ಏನಾದರೂ ಕೂಡ ಹೇಳ ಬಹುದು ಎಂದರು.

ಬೈರತಿ ಬಸವರಾಜ್ ಕೊ*ಲೆ ಆರೋಪಿಯಾಗಿರುವ ಪ್ರಕರಣದ ಬಗ್ಗೆಯೂ ತನಿಖೆ ನಡೆಯುತ್ತಿದೆ.ಈಗಾಗಲೇ ಪ್ರಕರಣ ವನ್ನು ಸಿಒಡಿ ತನಿಖೆಗೆ ಕೊಡಲಾಗಿದೆ. ತನಿಖೆ ನಡೆಯುತ್ತಿದ್ದು ಅವರ ಪಾತ್ರ ಇದೆಯ ಎನ್ನುವುದರ ಬಗ್ಗೆ ತನಿಖೆ ಮಾಡಿ ಯಾರು ತಪ್ಪಿತಸ್ಥರಿದ್ದಾರೆ. ಅವರ ಮೇಲೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಇದರಲ್ಲಿ ಯಾವ ರಾಜಕೀಯ ಒತ್ತಡ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಉಸ್ತುವಾರಿ ಸುರ್ಜೇವಾಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂಬುದು ಬಿಜೆಪಿಯವರ ಆರೋಪ ಅಷ್ಟೇ. ಅದರಲ್ಲಿ ಸತ್ಯಾಂಶ ಇಲ್ಲ. ಇದೇನೂ ಹೊಸದೇನಲ್ಲ. ಸ್ವಾಭಾವಿಕವಾಗಿ ಪ್ರಣಾಳಿಕೆ ಜನರಿಗೆ ನೀಡಿದ ಭರವಸೆಗಳನ್ನು ಅನುಷ್ಠಾನ ಮಾಡಿ ಅಂತ ಆಗಾಗ ಬಂದು ನೋಡುತ್ತಾರೆ. ಅದು ನಮ್ಮ ಪಕ್ಷದ ಜವಾಬ್ದಾರಿ ಕೂಡ ಹಾಗಾಗಿ ಅವರು ಆಗಾಗ ಬರುತ್ತಾರೆ ಹೋಗುತ್ತಾರೆ. ಅವರು ಅಧಿಕಾರಿಗಳನ್ನು ಕರೆದು ಮಾತನಾಡಿಲ್ಲ,ಸೂಚನೆನೂ ಕೊಟ್ಟಿಲ್ಲ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ. ಬಿಜೆಪಿಯವರು, ಜೆಡಿಎಸ್ ನವರು ಸೇರಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ” ಎಂದರು.

ಕೆಲವೊಂದು ಅಂತರಿಕ ಪಕ್ಷದ ವಿಚಾರ. ಅದಕ್ಕೂ ಬಿಜೆಪಿಗೆ ಏನು ಸಂಬಂಧ. ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಬರುವುದಿಲ್ಲವಾ.ಅವರು ಬಂದು ಅವರ ಪಕ್ಷದವರನ್ನು ಯಾಕೆ ಮಾತನಾಡಿಸುತ್ತಾರೆ. ಅದೇ ರೀತಿ ನಮ್ಮ ಪಕ್ಷದ ಉಸ್ತುವಾರಿ ಸಹ ಬರುತ್ತಾರೆ” ಎಂದರು.

”ರಾಜ್ಯದಲ್ಲಿ ಯೂರಿಯಾ ಗೊಬ್ಬರ ಅಭಾವ ಉಂಟಾಗಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಕೇಂದ್ರ ಸರ್ಕಾರಕ್ಕೆ ಇಲ್ಲಿಯವರೆಗೆ ಏನು ಕೇಳಿಕೊಂಡಿದ್ದೇವು ಅಷ್ಟನ್ನು ಕೊಟ್ಟಿಲ್ಲ. ಯೂರಿಯಾ ಗೊಬ್ಬರ ಕಡಿಮೆ ಇದೆ. ಅದಕ್ಕಾಗಿ ಯೂರಿಯಾ ಬೇಕು ಅಂತಾ ಜನ ಕೇಳುತ್ತಿದ್ದಾರೆ. ನಾವು ಕೇಳಿದಷ್ಟು ಕೊಡಬೇಕಲ್ಲ ಕೇಂದ್ರ ಸರ್ಕಾರದವರು. ನಮ್ಮ ಹತ್ತಿರ ಏನು ಸ್ಟಾಕ್ ಇದೆ ಅದನ್ನು ಕೊಡಲಾಗುತ್ತಿದೆ” ಎಂದರು.

ರಾಜ್ಯದ ಪೊಲೀಸರಿಗೆ ಪಿ ಕ್ಯಾಪ್ ಗಳನ್ನು ಸದ್ಯದಲ್ಲೇ ಕೊಡಲಾಗುವುದು.ಈ ಬಗ್ಗೆ ಅದೇಶ ಮಾಡಿದ್ದು ಮುಖ್ಯಮಂತ್ರಿಗಳು ನಾವು ಎಲ್ಲರೂ ಸೇರಿ ಸಲೆಕ್ಟ್ ಮಾಡಿದ್ದೇವೆ ಆದಷ್ಟು ಶೀಘ್ರವಾಗಿ ಕೊಡಲಾಗುವುದು ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button