ಮೊತ್ತ ಮೊದಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸು; ಮುಹಮ್ಮದ್ ಇಯಾಸ್‌ಗೆ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ!

ಮುಹಮ್ಮದ್ ಇಯಾಸ್ (MUHAMMAD EYAS) ಅವರು CA Final May 2025 ಪರೀಕ್ಷೆಯಲ್ಲಿ ಮೊಟ್ಟ ಮೊದಲ ಪ್ರಯತ್ನದಲ್ಲೇ ಗ್ರೂಪ್ I ಮತ್ತು ಗ್ರೂಪ್ II ಎರಡರಲ್ಲೂ ಉತ್ತೀರ್ಣರಾಗಿದ್ದಾರೆ. ಪೆರ್ನೆ ಇಸ್ಮಾಯಿಲ್ ಮತ್ತು ರುಖ್ಯಾ ದಂಪತಿಗಳ ಎರಡನೇ ಪುತ್ರರಾದ ಇಯಾಸ್, ಈ ಕಠಿಣ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಭೇದಿಸಿರುವುದು ಅವರ ಅಸಾಮಾನ್ಯ ಪ್ರತಿಭೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸ್ಪಷ್ಟ ನಿದರ್ಶನ.

ಈ ಯಶಸ್ಸು ಕೇವಲ ಒಂದು ಅಂಕಪಟ್ಟಿ ಅಥವಾ ಪದವಿ ಮಾತ್ರವಲ್ಲ, ಇದು ಇಯಾಸ್ ಅವರ ಅಚಲವಾದ ಸಂಕಲ್ಪಶಕ್ತಿ, ತಾಳ್ಮೆ ಮತ್ತು ಲಕ್ಷ್ಯ ಸಾಧಿಸುವ ಛಲದ ಪ್ರತೀಕ. ಮೊದಲ ಪ್ರಯತ್ನದಲ್ಲೇ ಇಂತಹ ದೊಡ್ಡ ಸಾಧನೆ ಮಾಡುವುದು ಅಪರೂಪ. ಇದು ಅವರ ಸಾಮರ್ಥ್ಯಕ್ಕೆ ಸಂದ ದೊಡ್ಡ ಗೌರವ, ಮತ್ತು ಹೆತ್ತವರಿಗೆ ಹೆಮ್ಮೆ ತಂದಿದೆ.

Latest Indian news

Popular Stories