ಅಕ್ಟೋಬರ್ 1 ರಿಂದ ಪದವಿ ಕಾಲೇಜು ಆರಂಭಕ್ಕೆ ಯುಜಿಸಿ ಸೂಚನೆ

ನವದೆಹಲಿ: ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಯುಜಿಸಿ ಸೂಚನೆ ನೀಡಿದೆ. ಪದವಿ ಕಾಲೇಜುಗಳ ಆರಂಭಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು ಆರಂಭಿಸುವ0ತೆ ಸೂಚನೆ ನೀಡಿದೆ.
ಮಾರ್ಗಸೂಚಿಗಳ ಪ್ರಕಾರ, ಅಂತಿಮ ವರ್ಷ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್, ಆಫ್‌ಲೈನ್ ಅಥವಾ ಬ್ಲೆಂಡ್ ಮಾಡಿದ ಮೋಡ್‌ನಲ್ಲಿ ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕು. ಇದಲ್ಲದೆ ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳ ಆಧಾರದ ಮೇಲೆ ಇಂಟರ್ ಮೀಡಿಯೆಟ್ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ನಿರ್ಧಾರವು 2020ರಲ್ಲಿ ಅನುಸರಿಸಿದ ನಿಯಮಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದೆ.
ಹೊಸ ಪ್ರವೇಶಗಳಿಗೆ ಸಂಬ0ಧಿಸಿದ0ತೆ ಯುಜಿಸಿ ಸೆಪ್ಟೆಂಬರ್ 30ರೊಳಗೆ ಮೊದಲ ವರ್ಷದ ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶಾತಿ ಮುಗಿಸುವಂತೆ ಸೂಚಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು 2021-22ರ ಶೈಕ್ಷಣಿಕ ಅಧಿವೇಶನದ ಪದವಿ ಪೂರ್ವ ಕೋರ್ಸ್ಗಳು, ಕಾರ್ಯಕ್ರಮಗಳ ಪ್ರವೇಶ ಪ್ರಕ್ರಿಯೆಯು ಸಿಬಿಎಸ್‌ಇ, ಐಸಿಎಸ್‌ಇ ಮತ್ತು ರಾಜ್ಯ ಮಂಡಳಿಗಳ ಫಲಿತಾಂಶ ಘೋಷಣೆ ನಂತರವೇ ಪ್ರಾರಂಭವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಎಲ್ಲ ಶಾಲಾ ಮಂಡಳಿಗಳು ಜುಲೈ 31ರೊಳಗೆ ತರಗತಿ, ಗ್ರೇಡ್-12 ಪರೀಕ್ಷೆಗಳಿಗೆ ಫಲಿತಾಂಶಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೊದಲ ಸೆಮಿಸ್ಟರ್ ವರ್ಷದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಅಕ್ಟೋಬರ್ 1ರಿಂದ ಪ್ರಾರಂಭವಾಗಲಿದೆ. ಅರ್ಹತಾ ಪರೀಕ್ಷೆಗಳಿಗೆ ಸಂಬ0ಧಿಸಿದ ದಾಖಲೆಗಳನ್ನು ಡಿಸೆಂಬರ್ 31ರೊಳಗೆ ಪಡೆಯಬಹುದು.

Latest Indian news

Popular Stories