ಜುಲೈ ೮ ಹಾಗೂ ೯ ರಂದು ಉದ್ಯೋಗ ಮೇಳ

ಕಲಬುರಗಿ,ಜುಲೈ.೦೭.(ಕ.ವಾ.)-ಮೆರಿಟ್ಯೂಡ್ ಸ್ಕೀಲ್ ಡೆವಲಪ್‌ಮೆಂಟ್ ಪ್ರೆöÊವೇಟ್ ಲಿಮಿಟೆಡ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ಜುಲೈ ೮ ಹಾಗೂ ೯ ರಂದು ಎರಡು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟೆಯವರೆಗೆ ಕೆಳಕಂಡ ಹುದ್ದೆಯ ನೇಮಕಾತಿಗಾಗಿ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಬಸ್ ಡಿಪೋ ನಂ. ೧ ಎದುರುಗಡೆಯಿರುವ (ಪುರುಷ) ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‌ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ವಾಣ ಜ್ಯ ಸೇವಾ ಅಧಿಕಾರಿ (ಕ್ಷೇತ್ರ ಕಾರ್ಯ) ಹುದ್ದೆಗೆ ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ., ಐಟಿಐ, ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೨ ವರ್ಷದೊಳಗಿರಬೇಕು. ಮಾಸಿಕ ೧೫,೦೦೦ ರಿಂದ ೧೮,೦೦೦ ರೂ. ವೇತನ ನೀಡಲಾಗುತ್ತದೆ.
ಅರ್ಹ ಪುರುಷ ಅಭ್ಯರ್ಥಿಗಳನ್ನು ಮೇಲ್ಕಂಡ ದಿನದಂದು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೬೬೦೯೯೬೦೯೩, ೭೪೮೩೧೫೫೩೪೫ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Latest Indian news

Popular Stories

error: Content is protected !!