ಸುಂಟಿಕೊಪ್ಪದ ಸೌಮ್ಯಶ್ರಿ ಕೆ, ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೆೇಟ್ ಪ್ರಾಪ್ತಿಯಾಗಿದೆ.
ಮಂಗಳೂರು ವಿ.ವಿಯ ಅನ್ವಯಿಕ ಸಸ್ಯಶಾಸ್ತ್ರವಿಭಾಗದ ಪ್ರೊ, ರಾಜು ಕೖಷ್ಣ ಚಲನ್ನಾವರ್ ಮಾಗ೯ದಶ೯ನದಲ್ಲಿ ಸೌಮ್ಯಶ್ರೀ ಮಂಡಿಸಿದ ಔಷಧೀಯ ಸಸ್ಯಗಳ ಸಾರಗಳಿಂದ ಸಂಭಾವ್ಯ ನೈಸಗಿ೯ಕ ಜೈವಿಕ ಸಕ್ರಿಯ ಸಂಯುಕ್ತಗಳ ತಪಾಸಣೆ ಮತ್ತು ಮಲೇರಿಯಾ ಹರಡುವ ಸೊಳ್ಳೆಗಳ ಮೇಲೆ ಅವುಗಳ ಪರಿಣಾಮ ಎಂಬ ವಿಚಾರದ ಪ್ರಬಂಧಕ್ಕಾಗಿ ಪಿ,ಎಚ್,ಡಿ ಲಭ್ಯವಾಗಿದೆ.
ಡಾ ಸೌಮ್ಯಶ್ರೀ ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ ನ ಗೋಪಾಲಭಟ್, ತಾರಾ ದಂಪತಿಯ ಸೊಸೆಯಾಗಿದ್ದು ನಿಖಿಲ್ ಭಟ್ ಕೆ, ಅವರ ಪತ್ನಿಯಾಗಿದ್ದಾರೆ, ಕಾಸರಗೋಡು ಕಾಕುಂಜೆಯ ಶಂಕರನಾರಾಯಣ ಭಟ್, ಮಾಲತಿ ಭಟ್ ಅವರ ದ್ವಿತೀಯ ಪುತ್ರಿಯಾಗಿದ್ದಾರೆ.