ಜಾರ್ಖಂಡ್: ತರಕಾರಿ ಮಾರಾಟಗಾರರ ಮಗಳು ಝೀನತ್ ಪರ್ವೀನ್ 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್

ಜಾರ್ಖಂಡ್: ತರಕಾರಿ ಮಾರಾಟಗಾರರ ಮಗಳು ಝೀನತ್ ಪರ್ವೀನ್ 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್

ತರಕಾರಿ ಮಾರಾಟಗಾರರೊಬ್ಬರ ಮಗಳಾದ ಝೀನತ್ ಪರ್ವೀನ್ ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್‌ನ 12 ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾಳೆ. ರಾಂಚಿಯಿಂದ ಬಂದಿರುವ ಝೀನತ್ ಆರ್ಟ್ಸ್ ಸ್ಟ್ರೀಮ್‌ನಲ್ಲಿ 94.40% ರಷ್ಟು ಅಂಕಗಳನ್ನು ಗಳಿಸಿ ರಾಜ್ಯದ ಟಾಪರ್ ಆವಾರ್ಡ್ ಅಸ್ಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತನ್ನ ಸರ್ಕಾರಿ ಶಾಲೆಗೆ ಹೋಗಲು 10 ಕಿಲೋಮೀಟರ್‌ಗಳಷ್ಟು ದೈನಂದಿನ ಪ್ರಯಾಣ ಸೇರಿದಂತೆ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತ ಜೀನತ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

ಝೀನತ್ ತನ್ನ ಸಾಧನೆಯ ಬಗ್ಗೆ ಮಾತನಾಡುತ್ತಾ, “ನನ್ನ ಶಿಕ್ಷಕರು ಮತ್ತು ಕುಟುಂಬದ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ನನ್ನ ಶಿಕ್ಷಕರು ನಾನು ರಾಜ್ಯ ಟಾಪರ್ ಎಂದು ಹೆಮ್ಮೆಯಿಂದ ಹೇಳಿದಾಗ ನನಗೆ ಅಗಾಧವಾದ ಖುಷಿ ತಂದಿದೆ” ಎಂದರು.

ಅವರು ತಮ್ಮ ಪ್ರಾಥಮಿಕ ಶಿಕ್ಷಣಕ್ಕಾಗಿ ದಿನಕ್ಕೆ 10 ಕಿ.ಮಿ ಪ್ರಯಾಣಿಸುತ್ತಿದ್ದರು. ಕೆಲವೊಮ್ಮೆ ಬೈಸಿಕಲ್, ಆಟೋ ಮತ್ತು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಝೀನತ್ ಅರ್ಥಿಕವಾಗಿ ಹಿಂದುಳಿದ ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.

ಮುಂದೆ ಅವರು ನಾಗರಿಕ ಸೇವೆಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. “ನಾನು UPSC ಗೆ ತಯಾರಿ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

Latest Indian news

Popular Stories