ಮುಲಾಯಮ್ ಸಿಂಗ್ ಯಾದವ್ ಅವರ ಸೊಸೆ ಬಿಜೆಪಿಗೆ ಸೇರ್ಪಡೆ

ಉ.ಪ್ರ: ಬಿಜೆಪಿಯಿಂದ ಶಾಸಕರು ದಂಡು ಸಮಾಜವಾದಿ ಪಕ್ಷದ ಕಡೆಗೆ ವಾಲುತ್ತಿರುವ ಸಂದರ್ಭದಲ್ಲೇ ಮುಲಾಯಮ್ ಸಿಂಗ್ ಯಾದವ್ ಅವರ ಸೊಸೆ ಅರ್ಪಣಾ ಯಾದವ್ ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಮುಲಾಯಮ್ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅರ್ಪಣಾ ಯಾದವ್ ಇದೀಗ ಬಿಜೆಪಿಗೆ ಸೇರ್ಪಣೆಗೊಂಡಿದ್ದಾರೆ‌.

2017 ರಲ್ಲಿ ಅರ್ಪಣಾ ಸಮಾಜವಾದಿ ಪಕ್ಷದ ಕಡೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅರ್ಪಣಾ ಅವರು ‘bAware’ ಎಂಬ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಮಹಿಳಾ ರಂಗದಲ್ಲಿ ತೊಡಗಿಸಿಕೊಂಡಿದ್ದರು.

Latest Indian news

Popular Stories