ElectionBidar

ಬೀದರ ದಕ್ಷಿಣ ಕ್ಷೇತ್ರದಲ್ಲಿ ಡಾ. ಹೆಬ್ಬಾಳೆ ಪರ ಮತಯಾಚನೆ

ಬೀದರ: ಮೇ 9 ರಂದು ನಡೆಯುವ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಿಮಿತ್ಯ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ. ರಾಜಕುಮಾರ ಹೆಬ್ಬಾಳೆಯವರು ಬೀದರ ದಕ್ಷಿಣ ಕ್ಷೇತ್ರದ ಭೋಸಗಾ, ಮನ್ನಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ತಮ್ಮ ಮತಯಾಚನೆ ಮಾಡಿದರು.
ಬೀದರ ದಕ್ಷಿಣ ವಿಭಾಗದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರಾಜಕುಮಾರ ಮಡಕಿಯವರು ಮಾತನಾಡಿ, `ಡಾ. ರಾಜಕುಮಾರ ಹೆಬ್ಬಾಳೆಯವರು ತಮ್ಮ ಹಿಂದೆ ಕಾರ್ಯಕರ್ತರ ದಂಡು ಇದ್ದರೂ ಕೂಡಾ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಕೇವಲ ಮೂರರಿಂದ ನಾಲ್ಕು ಜನರನ್ನು ಮಾತ್ರೆ ಜೊತೆಗೆ ಕರೆದುಕೊಂಡು ಬೀದರ ದಕ್ಷಿಣ ವಿಭಾಗದಲ್ಲಿ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಮತದಾರರ ಒಲವು ಹೆಬ್ಬಾಳೆಯವರ ಕಡೆಗಿದೆ. ಈಗಾಗಲೇ ಹಲವಾರು ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಇದು ಸಾಹಿತ್ಯ ಕ್ಷೇತ್ರ ಇರುವುದರಿಂದ ಇದರಲ್ಲಿ ರಾಜಕೀಯ ಬೆರೆಯುತ್ತಿರುವುದು ಸಾಹಿತಿಗಳಿಗೆ ಆತಂಕಕ್ಕೀಡು ಮಾಡಿದೆ. ಹಾಗಾಗಲು ಮತದಾರರು ಯಾವುದೇ ಕಾರಣಕ್ಕೂ ಬಿಡಬಾರದು. ರಾಜಕೀಯರಹಿತ, ದ್ವೇಷರಹಿತವಾಗಿ ಸಾಹಿತ್ಯ ಮತ್ತು ಜನಪದ ಕ್ಷೇತ್ರದ ಏಳಿಗೆಗಾಗಿ ದುಡಿಯುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಒಂದು ಅವಕಾಶ ನೀಡಬೇಕು. ಅಲ್ಲದೆ ಡಾ. ರಾಜಕುಮಾರ ಹೆಬ್ಬಾಳೆಯವರು ಕಳೆದ ಅವಧಿಯಲ್ಲಿಯೇ ಗೆಲುವು ಸಾಧಿಸುತ್ತಿದ್ದರು. ಆದರೆ ಈ ಹಿಂದಿನ ಅಧ್ಯಕ್ಷರು ತನಗೆ ಸಹಕಾರ ನೀಡುವಂತೆ ಬೇಡಿಕೊಂಡ ಕಾರಣ ಹೆಬ್ಬಾಳೆಯವರು ತಮ್ಮ ಅಧಿಕಾರ ತ್ಯಾಗ ಮಾಡಿ ಹಿಂದೆ ಸರಿದರು. ಈ ಬಾರಿ ಡಾ. ರಾಜಕುಮಾರ ಅವರಿಗೆ ಆರಿಸಿ ತಂದು ಕನ್ನಡಮಾತೆಯ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆಯವರು ಮಾತನಾಡಿ ಇಲ್ಲಿಯವರೆಗೆ ಸ್ವತಃ ಮನೆ ಹಣ ಖರ್ಚು ಮಾಡಿ, ಎಲ್ಲಾ ಕಡೆ ಓಡಾಡಿ ಸಾವಿರಾರು ಕಲಾವಿದರ ಬಾಳಿನಲ್ಲಿ ಜ್ಯೋತಿ ಬೆಳಗಿಸುವ ಕಾರ್ಯ ಮಾಡಿರುವೆ. ಮುಂದೆಯೂ ಬೀದರನಲ್ಲಿ ಅಂತರಾಷ್ಟಿçÃಯ ಜನಪದ ಸಮ್ಮೇಳನ ಆಯೋಜಿಸಿ ತನ್ಮೂಲಕ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ವೇದಿಕೆ ಒದಗಿಸುವ ಬಹುದೊಡ್ಡ ಕನಸಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತದಾರರು ಬೆಂಬಲ ನೀಡಬೇಕು ಎಂದು ಕೋರಿದರು. ಚನ್ನಬಸವ ಕಮಾನ್ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button