ಬಿಜೆಪಿ ಬಹುಮತ ಪಡೆಯುವುದು ಅನುಮಾನ; NDA ಸರಕಾರ ರಚನೆಯತ್ತ – ಮೋದಿ ಬದಲು ಗಡ್ಕರಿ ಪ್ರಧಾನಿಯಾಗುವ ಸಾಧ್ಯತೆ?

ಲೋಕಸಭಾ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಮೂಡಿಸಿದ್ದು ಎಕ್ಸಿಟ್ ಪೋಲ್ ಗೆ ತೀರಾ ವ್ಯತಿರಿಕ್ತ ಫಲಿತಾಂಶದತ್ತ ದಾಪುಗಾಲು ಹಾಕುತ್ತಿದೆ.

ಇಂಡಿಯಾ ಮೈತ್ರಿಕೂಟ 228, NDA 296 ಸ್ಥಾನ ಮುನ್ನಡೆಯಲಿದ್ದು ಇದರಲ್ಲಿ ಬಿಜೆಪಿ 233 ರ ಸುತ್ತ ಸುತ್ತುತ್ತಿದೆ. ಕಾಂಗ್ರೆಸ್ 100+ ಸ್ಥಾನ ಮುನ್ನಡೆ ಸಾಧಿಸಿ ಸಾಧನೆಗೈದಿದೆ. ಇದರ ಮಧ್ಯೆ ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಸಾಧನೆಗೈದಿದ್ದು ಈ ಹಿನ್ನಲೆಯಲ್ಲಿ ಮೋದಿ ಪ್ರಧಾನಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಬಾರಿ ಕೇವಲ 75 ಸಾವಿರ ಮತದಲ್ಲಿ ಮುನ್ನಡೆಯಲ್ಲಿರುವುದು ದೇಶದ ಪ್ರಧಾನಿಗೆ ಸ್ವಲ್ಪ ಮುಜುಗರ ಎನಿಸಿದೆ‌

ಈತನ್ಮಧ್ಯೆ ಆರ್.ಎಸ್.ಎಸ್ ನಿತಿನ್ ಗಡ್ಕರಿಯನ್ನು ಪ್ರಧಾನಿಯಾಗಿ ಮಾಡುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ‌. ಮೈತ್ರಿಯ ಸಹಾಯವಿಲ್ಲದೆ ಬಿಜೆಪಿ ಸರಕಾರ ರಚಿಸುವುದು ಕಷ್ಟಕರವಾಗಿದ್ದು ನಿತೀಶ್ ಯೂಟರ್ನ್ ಹೊಡೆಯುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.

Latest Indian news

Popular Stories