Election

ಶರದ್ ಪವಾರ್ ಸುಳ್ಳು ಹೇಳ್ತಿದ್ದಾರೆ ಎಂದ ಫಡ್ನವಿಸ್

ಮುಂಬೈ : ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರ ರಕ್ಷಣೆ ಮಾಡುತ್ತಿದ್ದಾರೆ. ಯಾವ ಸತ್ಯಗಳೂ ಅವರ ಮಾತಿನಲ್ಲಿಲ್ಲ ಎಂದು ಬಿಜೆಪಿ ನಾಯಕ ದೇವೆಂದ್ರ ಫಡ್ನವಿಸ್ ಆರೋಪಿಸಿದ್ದಾರೆ.
ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವ ದಿನಾಂಕದಲ್ಲಿ ದೇಶ್‌ಮುಖ್ ನಾಗ್ಪುರ ದ ಮನೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದರು ಎಂದು ಪವಾರ್ ನಿನ್ನೆ(ಸೋಮವಾರ, ಮಾ.22) ಹೇಳಿದ್ದರು. ಇದಕ್ಕೆ ಫಡ್ನವಿಸ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗೃಹ ಸಚಿವ ದೇಶಮುಖ್ ಅವರು ಪೊಲೀಸ್ ಅಧಿಕೃತ ಮಾಹಿತಿ ಪ್ರಕಾರ, ಫೆಬ್ರವರಿ 17 ರಂದು ಸಹ್ಯಾದ್ರಿ ಅತಿಥಿ ಗ್ರಹಕ್ಕೆ ತೆರಳಿದ್ದರು. ಮತ್ತು ಫೆ. 24 ರಂದು ಮಂತ್ರಾಲಯಕ್ಕೆ ತೆರಳಿದ್ದರು. ಫೆಬ್ರವರಿ 15 ರಿಂದ 27ರ ತನಕ ಅವರು ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಆದರೆ, ಕ್ವಾರಂಟೈನ್ ನನ್ನು ಮುರಿದು ಅಧಿಕಾರಿಗಳನ್ನು ಭೇಟಿಯಾಗಿದ್ದರು. ಅವರು ಐಸೋಲೇಶನ್‌ನಲ್ಲಿ ಇದ್ದಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಫಡ್ನವಿಸ್ ಹೇಳಿದ್ದಾರೆ.
ಗೃಹ ಸಚಿವರ ದಿನಚರಿ ಕುರಿತು ಶರದ್ ಪವಾರ್ ಅವರು ಸೋಮವಾರ ಸರಿಯಾದ ಮಾಹಿತಿ ನೀಡಿಲ್ಲ ಎಂದು ಫಡ್ನವಿಸ್ ದೂರಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button