Election

ಮನಗೂಳಿ ಪುತ್ರ ಶಾಂತವೀರ್‌ಗೆ ಜೆಡಿಎಸ್ ಟಿಕೇಟ್ !

ವಿಜಯಪುರ: ಸಿಂಧಗಿ ಉಪಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ.
ಜೆಡಿಎಸ್ ಶಾಸಕ, ದಿ. ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಮನಗೂಳಿ ಅವರ ಕಿರಿಯ ಪುತ್ರ ಡಾ. ಶಾಂತವೀರ್ ಮನಗೂಳಿಯನ್ನು ಕಣಕ್ಕಿಳಿಸಲು ಜೆಡಿಎಲ್ ಯೋಜಿಸುತ್ತಿದೆ.
ಟಿಕೆಟ್ ನೀಡುವುದಾಗಿ ಅಶೋಕ್ ಅವರಿಗೆ ನಾವು ಭರವಸೆ ನೀಡಿದ್ದೇವು, ಆದರೆ ಅವರು ಪಕ್ಷ ತೊರೆದಿದ್ದಾರೆ. ಹೀಗಾಗಿ ಶಾಂತವೀರ್ ನಮ್ಮ ಮೊದಲ ಆದ್ಯತೆಯಾಗಿದ್ದಾರೆ. ಅವರಿಗೆ ಕ್ಷೇತ್ರದ ಜನದ ಜೊತೆ ಉತ್ತಮ ಸಂಬAಧ ಹಾಗೂ ಸಂಪರ್ಕವಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಯೆಂಡಿಗೇರಿ ಹೇಳಿದ್ದಾರೆ. ಶನಿವಾರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ ಅವರು, ನಾವು ಕಾರ್ಯಕರ್ತರ ಸಭೆ ಕರೆದು ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಸಿಂಧಗಿ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಇದುವರೆಗೂ ಪಕ್ಷದಿಂದ ಯಾರೂ ನನ್ನನ್ನು ಸಂಪರ್ಕಿಸಿಲ್ಲ, ಹೀಗಾಗಿ ನಾನು ಇನ್ನೂ ತೀರ್ಮಾನಿಸಿಲ್ಲ, ಟಿಕೆಟ್ ಬಗ್ಗೆ ಪಕ್ಷದ ಹಿರಿಯ ನಾಯಕರು ನಿರ್ಧಾರ ಮಾಡಲಿದ್ದಾರೆ’ ಎಂದು ಶಾಂತವೀರ್ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button