
ಮಡಿಕೇರಿ ಏ.೩೦ : ಮಡಿಕೇರಿ ನಗರಸಭೆಯಲ್ಲಿ ಕಳೆದ ಬಾರಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಈ ಬಾರಿ ಸ್ಥಾನಗಳಲ್ಲಿ ಜಯ ಸಾಧಿಸಿ ಬೀಗಿದೆ.

Bashir 
Meri 
Neema 
Mansoor
ಪ್ರಮುಖ ವಿರೋಧ ಪಕ್ಷವಾಗಿಯೂ ಗುರುತಿಸಿಕೊಂಡಿರುವ ಎಸ್ ಡಿಪಿಐ ವಾರ್ಡ್ ಸಂಖ್ಯೆ ೭ ಅಮೀನ್ ಮೊಹಿಸಿನ್ (೩೮೨), ವಾರ್ಡ್ ಸಂಖ್ಯೆ ೪ ಮನ್ಸೂರ್ ಆಲಿ (೭೦೧) ಹಾಗೂ ವಾರ್ಡ್ ಸಂಖ್ಯೆ ೧೧ ನೀಮಾಅರ್ಷದ್ (೧೨೫) ಅವರನ್ನು ಎರಡನೇ ಬಾರಿಗೆ ನಗರಸಭೆಗೆ ಕಳುಹಿಸಿಕೊಡುತ್ತಿದೆ. ವಾರ್ಡ್ ಸಂಖ್ಯೆ ೩ ಮೇರಿ ವೇಗಸ್ (೬೭೬) ಹಾಗೂ ವಾರ್ಡ್ ಸಂಖ್ಯೆ ೧೨ ಬಷೀರ್ ಅಹಮ್ಮದ್ (೨೩೯) ಉಳಿದ ವಿಜೇತರಾಗಿದ್ದಾರೆ.
ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನೂತನ ಸದಸ್ಯರು ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಫೋಟೋಗಳಿವೆ








