
ಸ್ವಯಂ ಘೋಷಿತ ನಾಯಕರನ್ನು ಮೆಚ್ಚಿಸಲು ಇಲ್ಲಸಲ್ಲದ ಹೇಳಿಕೆ : ಯುವ ಜೆಡಿಎಸ್ ಅಸಮಾಧಾನ
ಮಡಿಕೇರಿ ಮೇ ೨ : ಜಾತ್ಯತೀತ ಜನತಾದಳದಲ್ಲಿ ಪ್ರಾಥಮಿಕ ಸದಸ್ಯತ್ವವನ್ನೇ ಹೊಂದದವರು ಸ್ವಯಂ ಘೋಷಿತ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಯುವ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಾಶಿರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಪ್ರಯತ್ನದ ಫಲವಾಗಿ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ. ಅಲ್ಲದೆ ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಹಲವು ವಾರ್ಡ್ ಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಬೆಳವಣ ಗೆಯನ್ನು ಸಹಿಸದ ಕೆಲವು ಸ್ವಯಂ ಘೋಷಿತ ಪ್ರಚಾರ ಪ್ರಿಯ ನಾಯಕರು ಗಣೇಶ್ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಕೆ.ಎಂ.ಗಣೇಶ್ ಅವರು ಸ್ಪಂದಿಸುತ್ತಿರುವ ಫಲವಾಗಿ ಮಡಿಕೇರಿ ನಗರದಲ್ಲಿ ಜೆಡಿಎಸ್ ನ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಆಡಳಿತರೂಢ ಪಕ್ಷವೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುಮತ ಗಳಿಸುವುದು ಸಾಮಾನ್ಯ. ಆ ಪ್ರಕಾರವಾಗಿ ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎರಡು ರಾಷ್ಟಿçÃಯ ಪಕ್ಷಗಳ ಬಳಿ ಅಧಿಕಾರ ಮತ್ತು ಹಣವಿದೆ. ಆದರೆ ಜೆಡಿಎಸ್ ಜನಬಲದಿಂದ ಮಾತ್ರ ಪ್ರಗತಿ ಸಾಧಿಸುತ್ತಿದೆ. ಪಕ್ಷಕ್ಕಾಗಿ ಯಾವುದೇ ಕೊಡುಗೆಯನ್ನು ನೀಡದ ಸ್ವಯಂ ಘೋಷಿತ ನಾಯಕರ ಪಿತೂರಿಯಿಂದ ಗಣೇಶ್ ಅವರ ರಾಜಕೀಯ ವರ್ಚಸ್ಸಿಗೆ ಯಾವುದೇ ದಕ್ಕೆಯಾಗುವುದಿಲ್ಲವೆಂದು ಜಾಶಿರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜೆಡಿಎಸ್ ವರಿಷ್ಠರಿಗೆ ದೂರು ನೀಡುವುದಾಗಿ ಹೇಳಿಕೆ ನೀಡಿದವರಿಗೆ ಹಾಗೂ ಪ್ರಚೋದಿಸಿದವರಿಗೆ ಕನಿಷ್ಠ ವರಿಷ್ಠರ ಬಾಗಿಲು ತಟ್ಟುವ ವರ್ಚಸ್ಸು ಕೂಡ ಇಲ್ಲವೆಂದು ಅವರು ವ್ಯಂಗ್ಯವಾಡಿದ್ದಾರೆ.
ಅಪಪ್ರಚಾರದಲ್ಲಿ ತೊಡಗಿರುವವರು ನಗರಸಭೆ ಚುನಾವಣೆಯಲ್ಲಿ ತಮ್ಮ ಬೂತ್ ನಲ್ಲಿ ಜೆಡಿಎಸ್ ಪಕ್ಷಕ್ಕೆ ಎಷ್ಟು ಮತಗಳನ್ನು ಗಳಿಸಿಕೊಟ್ಟಿದ್ದಾರೆ, ಈ ಹಿಂದೆ ನಡೆದೆ ಚುನಾವಣೆಗಳಲ್ಲಿ ಇವರ ಸಾಧನೆ ಏನು ಎನ್ನುವುದನ್ನು ಸಾಬೀತು ಪಡಿಸಲಿ ಮತ್ತು ಪಿತೂರಿ ನಡೆಸುತ್ತಿರುವವರು ಮೊದಲು ಗ್ರಾ.ಪಂ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಜಾಶಿರ್ ಸವಾಲು ಹಾಕಿದ್ದಾರೆ.
ಕೇವಲ ನಾಮಫಲಕದಿಂದ ನಾಯಕನಾಗಲು ಸಾಧ್ಯವಿಲ್ಲ ಎನ್ನುವುದನ್ನು ಸ್ವಯಂ ಘೋಷಿತರು ಅರ್ಥಮಾಡಿಕೊಂಡು ಕ್ಷÄಲ್ಲಕ ರಾಜಕಾರಣದಿಂದ ದೂರ ಸರಿದು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಫೋಟೋ :: ಜಾಶಿರ್




