ವಾರಾಣಸಿಯಲ್ಲಿ ರಿಯಲ್‌ ಮೋದಿ ವಿರುದ್ಧ ರೀಲ್‌ ಮೋದಿ ಫೈಟ್‌!

ಜೈಪುರ: ನರೇಂದ್ರ ಮೋದಿ ಧ್ವನಿ ಅನುಕರಣೆ ಮೂಲಕ ಖ್ಯಾತನಾಗಿರುವ ರಾಜಸ್ಥಾನ ಮೂಲದ ಶ್ಯಾಮ್‌ ರಂಗೀಲಾ, ಮೋದಿ ವಿರುದ್ಧವೇ ಸ್ಪರ್ಧಿಸಲು ಮುಂದಾ ಗಿದ್ದಾರೆ.

“ಪ್ರಜಾ ಪ್ರಭುತ್ವ ಕೇವಲ ತೋರ್ಪಡಿಕೆ ಯಾಗಬಾರದು. ಸೂರತ್‌, ಇಂದೋರ್‌ ಗಳಲ್ಲಿ ಆದಂತೆ ವಾರಾಣಸಿಯಲ್ಲಿ ಆಗಬಾರದು. ಜನರು ಪ್ರಧಾನಿಯವರಿಗೇ ಮತ ನೀಡುವಾಗ, ನನಗೆ ಏಕೆ ಮತ ಹಾಕಲು ನಿರಾಕರಿಸುತ್ತಾರೆ? ಸ್ವಯಂ ಪ್ರೇರಿತನಾಗಿ ವಾರಾಣಸಿಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಹಾಸ್ಯ ಕಲಾವಿದನಾಗಿರುವ ನಾನು ನೈಜ ಜನಸೇವೆ ಮಾಡುತ್ತೇನೆ. ಶೀಘ್ರದಲ್ಲೇ ನಾಮಪತ್ರ ಸಲ್ಲಿಸುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.

Latest Indian news

Popular Stories