ಮಗಧೀರ’ ನಿಗೆ ಕೊರೊನಾ

ಬೆಂಗಳೂರು, ಡಿ.29 (ಯುಎನ್‍ಐ): ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮ್ಮಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಗ್ಗೆ ನಟ ರಾಮ್ ಚರಣ್ ಮಂಗಳವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
“ನಾನು ಕೋವಿಡ್ -19 ಪಾಸಿಟಿವ್ ವರದಿ ಪಡೆದಿದ್ದೇನೆ. ಯಾವುದೇ ಲಕ್ಷಣಗಳಿಲ್ಲ, ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಗುಣಮುಖವಾಗಿ ಬರುತ್ತೇನೆಂದು ಆಶಿಸುತ್ತೇವೆ.
“ಕಳೆದ ಎರಡು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿರಿ ಶೀಘ್ರದಲ್ಲೇ ನನ್ನ ಚೇತರಿಕೆಯ ಕುರಿತು ಹೆಚ್ಚಿನ ಮಾಹಿತಿ ಲಭಿಸಲಿದೆ.” ಎಂದು ನಟ ಟ್ವೀಟ್ ಮಾಡಿದ್ದಾರೆ.
ರಾಮ್ ಚರಣ್ ಅವರು ಡಿಸೆಂಬರ್ 22 ರವರೆಗೆ ಎಸ್.ಎಸ್.ರಾಜಮೌಳಿ ಅವರ “ಆರ್.ಆರ್.ಆರ್.” ಚಿತ್ರೀಕರಣದಲ್ಲಿದ್ದರು. ಅದೇ ದಿನ, ಅವರು ಸುಷ್ಮಿತಾ ಕೊನಿಡೆಲಾ ಅವರ ವೆಬ್ ಸರಣಿ ” ಶೂಟ್ ಔಟ್” ನ ಪ್ರಮೋಷನ್ ಗೆ ಸಹ ತೆರಳೀದ್ದರು. ಕ್ರಿಸ್‍ಮಸ್ ಮುನ್ನಾದಿನದಂದು, ನಟ ತನ್ನ ಕುಟುಂಬ ಸದಸ್ಯರಿಗೆ ಪಾರ್ಟಿ ಆಯೋಜಿಸಿದ್ದರು. ಈ ಸಂದರ್ಭದ ಫೆÇೀಟೋಗಳನ್ನು ಸಾಮಾಜಿಕ ತಾನಾದಲ್ಲಿ ಹಂಚಿಕೊಂಡಿದ್ದರು. ಈ ಪಾರ್ಟಿಯಲ್ಲಿ ಟಾಲಿವುಡ್ ನ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Latest Indian news

Popular Stories