Ghost Movie Review : ‘ಘೋಸ್ಟ್’ನಲ್ಲಿ ಶಿವಣ್ಣನ ಜೂಟಾಟ | ಒಂದು ಜೈಲ್ ಹೈಜಾಕ್ ಕಥೆ

ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅಭಿನಯದ ‘ಘೋಸ್ಟ್’ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮೊದಲ ಬಾರಿಗೆ ಶಿವಣ್ಣನಿಗೆ ಶ್ರೀನಿ ನಿರ್ದೇಶನ ಮಾಡಿದ್ದು, ಟೀಸರ್, ಪೋಸ್ಟರ್ ಕೂಡ ಸಖತ್ ಕ್ಯೂರಿಯಸಿಟಿ ಬಿಲ್ಡ್ ಮಾಡಿತ್ತು. ಸದ್ಯ ತೆರೆಗೆ ಬಂದಿರುವ ‘ಘೋಸ್ಟ್’ ಹೇಗಿದೆ? ಹೀಗೆ ಅನೇಕ ಕುತೂಹಲಗಳು ನಿಮ್ಮಗೂ ಮೂಡಿರಬಹುದು,
ಒಂದು ಜೈಲ್ ಹೈಜಾಕ್ ಕಥೆ
ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ‘ಘೋಸ್ಟ್’ ಸಿನಿಮಾವು ಸೆಂಟ್ರಲ್ ಜೈಲ್ವೊಂದನ್ನು ಹೈಜಾಕ್ ಮಾಡುವ ಕಥೆ. ಜೈಲ್ ಹೈಜಾಕ್ ಮಾಡುವುದು ಶಿವರಾಜ್ಕುಮಾರ್. ಅವರೇಕೆ ಜೈಲನ್ನೇ ಹೈಜಾಕ್ ಮಾಡುತ್ತಾರೆ? ಅಲ್ಲಿರುವ ಖೈದಿಗಳನ್ನೇ ಒತ್ತೆಯಾಳನ್ನಾಗಿ ಏಕೆ ಇಟ್ಟುಕೊಳ್ಳುತ್ತಾರೆ? ಶಿವರಾಜ್ಕುಮಾರ್ ಪಾತ್ರದ ಹೆಸರೇನು? ಅಷ್ಟಕ್ಕೂ ಆ ಪಾತ್ರದ ಹಿನ್ನೆಲೆ ಏನು… ಈ ಎಲ್ಲ ಪ್ರಶ್ನೆಗಳು ಸಿನಿಮಾ ನೋಡಲು ಶುರು ಮಾಡುತ್ತಿದ್ದಂತೆಯೇ ತಲೆಯಲ್ಲಿ ಕೊರೆಯಲು ಆರಂಭವಾಗುತ್ತದೆ. ಸಿನಿಮಾ ಚಕಚಕನೇ ಸಾಗುತ್ತಿದ್ದರೂ, ನಿರ್ದೇಶಕ ಶ್ರೀನಿ ಮಾತ್ರ ಎಲ್ಲ ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರ ನೀಡುತ್ತಾ ಸಾಗುತ್ತಾರೆ.

‘ಘೋಸ್ಟ್’ ಪ್ಲಸ್ ಏನು?
‘ಘೋಸ್ಟ್’ ಸಿನಿಮಾಗೆ ಮೇಜರ್ ಪ್ಲಸ್ ಪಾಯಿಂಟ್ ಶಿವಣ್ಣ ಅನ್ನೋದರಲ್ಲಿ ಅನುಮಾನವೇ ಬೇಡ. ಹಾಗೆಯೇ, ಶ್ರೀನಿ ಬರೆದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳಿವೆ. ಕೇವಲ 48 ಗಂಟೆಗಳಲ್ಲಿ ನಡೆಯುವ ಈ ಕಥೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಜಾಗವಿಲ್ಲದೇ ಇದ್ದರೂ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತದ ಮೂಲಕ ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಾರೆ. ಸಿನಿಮಾವನ್ನು ಆಗಾಗ ಇನ್ನೂ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಜಾಸ್ತಿ ಇದೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹೊಸತನದಿಂದ ಕೂಡಿದೆ. ದ್ವಿತಿಯಾರ್ಧ ಫ್ಯಾನ್ಸ್ಗೆ ಸಖತ್ ಇಷ್ಟವಾಗುತ್ತದೆ. ಹ್ಯಾಂಡ್ಸ್ಕಫ್ ಫೈಟ್ ಹೊಸತನದಿಂದ ಕೂಡಿದೆ. ಶಿವಣ್ಣನ ಡಿ-ಏಜಿಂಗ್ ಲುಕ್ ಮಾತ್ರ ಫ್ಯಾನ್ಸ್ಗೆ ಹಬ್ಬ. ಸಂಭಾಷಣೆ ಕೂಡ ಪಂಚಿಂಗ್ ಆಗಿದೆ. ಪಾರ್ಟ್ 2ಗೆ ಕೊಟ್ಟಿರುವ ಟ್ವಿಸ್ಟ್ ಚೆನ್ನಾಗಿದ್ದು, ‘ಘೋಸ್ಟ್ 2’ ಕುತೂಹಲ ಉಳಿಸಿಕೊಳ್ಳುವಲ್ಲಿ ಶ್ರೀನಿ ಸಕ್ಸಸ್ ಆಗಿದ್ದಾರೆ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಫುಲ್ ವಿಡಿಯೋ ನೋಡಿ

https://youtu.be/wY3H4hlXXPg
ಘೋಸ್ಟ್’ನಲ್ಲಿ ನೆಗೆಟಿವ್ ಏನು?
ಒಂದು ಹೈಜಾಕ್ ಕಥೆಯನ್ನು ಮಾಡಿಕೊಂಡಿರುವ ಶ್ರೀನಿ, ಅದನ್ನು ಇನ್ನಷ್ಟು ಶಾರ್ಪ್ ಆಗಿ ತೆರೆಗಿಳಿಸಬಹುದಾಗಿತ್ತು. ಲಾಜಿಕ್ ಅನ್ನೋ ಪದಕ್ಕೆ ಇಲ್ಲಿ ಮೂಟೆ ಕಟ್ಟಲಾಗಿದೆ! ಮೊದಲರ್ಧ ಕೊಂಚ ಗೊಂದಲಕಾರಿಯಾಗಿದೆ. ಕಥೆ ತೆರೆದುಕೊಳ್ಳಲು ಆರಂಭದಲ್ಲಿ ಸಮಯ ಹಿಡಿಯುತ್ತದೆ. ‘ಘೋಸ್ಟ್’ನಲ್ಲಿ ಶಿವಣ್ಣನ ಒನ್ಮ್ಯಾನ್ ಶೋ ಇಡೀ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಫುಲ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ! ತಮ್ಮ ರೆಗ್ಯುಲರ್ ಶೈಲಿ ಮಾಸ್ ಕಮರ್ಷಿಯಲ್ ಸಿನಿಮಾಗಳನ್ನು ಹೊರತುಪಡಿಸಿ, ಇಲ್ಲಿ ಬೇರೆಯದೇ ಶೈಲಿಯಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಕಣ್ಣಲ್ಲೇ ಜಾಸ್ತಿ ಮಾತಾಡುವ ಅವರಿಗೆ ಸಿನಿಮಾದಲ್ಲಿ ಸಂಭಾಷಣೆ ಕಮ್ಮಿ. ಇರುವ ಕೆಲವೇ ಕೆಲವು ಮಾತುಗಳು ‘ಚಿನ್ನ’ದಂತೆ ಇವೆ. ಹರೆಯದ ಹುಡುಗರು ಕೂಡ ನಾಚುವಂತೆ ಎನರ್ಜಿಯಿಂದ ಶಿವಣ್ಣ ತೆರೆಯನ್ನು ಆವರಿಸಿಕೊಳ್ಳುತ್ತಾರೆ.
ಉಳಿದ ಕಲಾವಿದರ ನಟನೆ ಹೇಗಿದೆ?

ಮಲಯಾಳಂ ನಟ ಜಯರಾಮ್ ಅವರು ಪೊಲೀಸ್ ಅಧಿಕಾರಿ ಪಾತ್ರವನ್ನು ಕೊಂಚ ಅಗ್ರೆಸ್ಸಿವ್ ಆಗಿಯೇ ಮಾಡಿದ್ದಾರೆ. ‘ಕೆಜಿಎಫ್’ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ‘ಬೀರ್ಬಲ್’ ಸಿನಿಮಾದ ಲಾಯರ್ ಮಹೇಶ್ ದಾಸ್ ಪಾತ್ರದಲ್ಲಿ ಶ್ರೀನಿ ಇಲ್ಲಿ ಎಂಟ್ರಿ ಕೊಟ್ಟಿದ್ದು, ಅದು ಇಂಟರೆಸ್ಟಿಂಗ್ ಎನಿಸುತ್ತದೆ.

ಹಣಮಂತ ಮಾಧವರಾವ್ ದೇಶಮುಖ

Latest Indian news

Popular Stories