ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ;ಪಟ್ಟಿ ಇಲ್ಲಿದೆ

ಬೆಂಗಳೂರು, ಏಪ್ರಿಲ್ 30: ಆರ್​ಬಿಐ ಕ್ಯಾಲಂಡರ್ ಪ್ರಕಾರ 2024ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದೆ. ಚುನಾವಣೆಯ ಮೂರರಿಂದ ಆರು ಹಂತಗಳ ಮತದಾನದ ಹಿನ್ನೆಲೆಯಲ್ಲಿ ಕೆಲವೆಡೆ ರಜೆ (Bank holidays 2024 May) ಇರುವುದು ಸೇರಿ ಮೇ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ 10 ದಿನ ರಜೆ ಇದೆ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ. ಮೇ 7, 13, 20 ಮತ್ತು 25ರಂದು ವಿವಿಧೆಡೆ ಮತದಾನ ನಡೆಯಲಿದೆ. ಮೇ 7ರಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಇರುವುದರಿಂದ ಅಲ್ಲಿನ ಬ್ಯಾಂಕುಗಳು ಬಂದ್ ಇರುತ್ತವೆ. ಮೇ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳೂ ಇವೆ.

ಕರ್ನಾಟಕದಲ್ಲಿ ಮೇ 1ಕ್ಕೆ ಕಾರ್ಮಿಕರ ದಿನದ ನಿಮಿತ್ತ ರಜೆ ಇದೆ. ಮೇ 7ಕ್ಕೆ 3ನೇ ಹಂತದ ಚುನಾವಣೆ ಇರುವುದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಮೇ 10ರಂದು ಬಸವ ಜಯಂತಿ, ಮೇ 23ರಂದು ಬುದ್ಧ ಪೂರ್ಣಿಮಾ ಇರುವುದರಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ರಜೆ ಕಲ್ಪಿಸಿದೆ.

ಮೇ 1, ಬುಧವಾರ: ವಿಶ್ವ ಕಾರ್ಮಿಕರ ದಿನ/ ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕ್ ರಜೆ)
ಮೇ 5: ಭಾನುವಾರ
ಮೇ 7, ಮಂಗಳವಾರ: ಲೋಕಸಭಾ ಚುನಾವಣೆ 3ನೇ ಹಂತ (ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಗೋವಾದಲ್ಲಿ ರಜೆ)
ಮೇ 8, ಬುಧವಾರ: ರಬೀಂದ್ರ ಜಯಂತಿ (ಪಶ್ಚಿಮ ಬಂಗಾಳದಲ್ಲಿ ರಜೆ)
ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ (ಕರ್ನಾಟಕದಲ್ಲಿ ರಜೆ)
ಮೇ 11: ಎರಡನೇ ಶನಿವಾರ
ಮೇ 12: ಭಾನುವಾರ
ಮೇ 13, ಸೋಮವಾರ: ಲೋಕಸಭಾ ಚುನಾವಣೆ 4ನೇ ಹಂತ (ಜಮ್ಮು ಕಾಶ್ಮೀರದಲ್ಲಿ ರಜೆ)
ಮೇ 16, ಗುರುವಾರ: ಸಿಕ್ಕಿಂ ರಾಜ್ಯ ದಿನ
ಮೇ 19: ಭಾನುವಾರ
ಮೇ 20: ಸೋಮವಾರ (5ನೇ ಹಂತದ ಚುನಾವಣೆ)
ಮೇ 23, ಗುರುವಾರ: ಬುದ್ಧ ಪೂರ್ಣಿಮಾ (ಪ್ರಮುಖ ನಗರಗಳಲ್ಲಿ ರಜೆ)
ಮೇ 25: ನಾಲ್ಕನೇ ಶನಿವಾರ
ಮೇ 26: ಭಾನುವಾರ
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು
ಮೇ 1, ಬುಧವಾರ: ಕಾರ್ಮಿಕರ ದಿನ
ಮೇ 5: ಭಾನುವಾರ
ಮೇ 7, ಮಂಗಳವಾರ: ಚುನಾವಣೆ (ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ)
ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ
ಮೇ 11: ಎರಡನೇ ಶನಿವಾರ
ಮೇ 12: ಭಾನುವಾರ
ಮೇ 19: ಭಾನುವಾರ
ಮೇ 23, ಗುರುವಾರ: ಬುದ್ಧ ಪೂರ್ಣಿಮಾ
ಮೇ 25: ನಾಲ್ಕನೇ ಶನಿವಾರ
ಮೇ 26: ಭಾನುವಾರ

ಬ್ಯಾಂಕುಗಳು ಬಂದ್ ಆಗಿದ್ದರೂ ಬಹುತೇಕ ಬ್ಯಾಂಕಿಂಗ್ ಸೇವೆಗಳು ಆನ್​ಲೈನ್​ನಲ್ಲಿ ಸದಾ ಲಭ್ಯ ಇರುತ್ತವೆ. ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಬಹುದು.

Latest Indian news

Popular Stories