ಕನ್ನಡದ ನಟಿ ರಚಿತಾ ರಾಮ್ ಕಾಲಿವುಡ್ ಗೂ ಕಾಲಿಡಲಿದ್ದಾರೆ

ಬೆಂಗಳೂರು, ನ 17 (ಯುಎನ್‍ಐ):- ಕನ್ನಡದ ಬ್ಯುಸಿ ನಟಿ ರಚಿತಾ ರಾಮ್ ಇನ್ನು ಮುಂದೆ ತಮಿಳು ಚಿತ್ರಗಳಲ್ಲೂ ನಟಿಸಲಿದ್ದಾರೆ. ಕನ್ನಡದ ಜತೆಗೆ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿರುವ ರಚಿತಾಗೆ ತಮಿಳು ಚಿತ್ರರಂಗದಿಂದಲೂ ಅವಕಾಶಗಳು ಅರಸಿ ಬರುತ್ತಿವೆ.
ತೆಲುಗಿನ ‘ಸೂಪರ್ ಮಚ್ಚಿ’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ರಚಿತಾ ಗೆ ತಮಿಳಿನಿಂದ ಆಫರ್‍ಗಳು ಬರಲಾರಂಭಿಸಿವೆ. “ತಮಿಳು ಸಿನಿಮಾರಂಗದಲ್ಲಿ ಆಫರ್‍ಗಳು ಬರುತ್ತಿವೆ. ಒಂದು ಸಿನಿಮಾ ಪಕ್ಕಾ ಆಗುವುದರಲ್ಲಿದೆ. ಆ ಸಿನಿಮಾ ಬಗ್ಗೆ ನಾನೇ ಸದ್ಯದಲ್ಲೇ ಅನೌನ್ಸ್ ಮಾಡುವೆ’ ಎಂದು ಸಂದರ್ಶನವೊಂದರಲ್ಲಿ ರಚಿತಾ ಹೇಳಿದ್ದಾರೆ.

Latest Indian news

Popular Stories