ಈಶಾನ್ಯ ದೆಹಲಿಯಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

ಹೊಸದಿಲ್ಲಿ, ಮೇ 17: ಈಶಾನ್ಯ ದಿಲ್ಲಿಯ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ ಮೇಲೆ ಕೆಲವು ದುಷ್ಕರ್ಮಿಗಳು ಶುಕ್ರವಾರ ಮಸಿ ಎಸೆದಿದ್ದಾರೆ.

ಸ್ಥಳೀಯ ಕೌನ್ಸಿಲರ್ ಛಾಯಾ ಶರ್ಮಾ ಅವರೊಂದಿಗಿನ ಪಕ್ಷದ ಸಭೆಯ ನಂತರ ಕನ್ಹಯ್ಯ ಹೊರಗೆ ಬರುತ್ತಿದ್ದಾಗ ನ್ಯೂ ಉಸ್ಮಾನ್‌ಪುರ ಪ್ರದೇಶದ ಎಎಪಿ ಕಚೇರಿಯ ಹೊರಗೆ ಈ ಘಟನೆ ಸಂಭವಿಸಿದೆ.

ಶರ್ಮಾ ಅವರ ದೂರಿನ ಪ್ರಕಾರ, “ಕೆಲವರು ಬಂದು ಕನ್ಹಯ್ಯಾ ಕುಮಾರ್‌ಗೆ ಹಾರ ಹಾಕಿದರು. ಅವರಿಗೆ ಮಾಲೆ ಹಾಕಿದ ನಂತರ ಕೆಲವರು ಷ. ಕನ್ಹಯ್ಯಾ ಕುಮಾರ್ ಮೇಲೆ ಶಾಯಿ ಎಸೆದು ಹಲ್ಲೆಗೆ ಯತ್ನಿಸಿದ್ದಾರೆ. ಛಾಯಾ ಶರ್ಮಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರು ಅನುಚಿತವಾಗಿ ವರ್ತಿಸಿ ಆಕೆಗೆ ಬೆದರಿಕೆ ಹಾಕಿದ್ದಾರೆ.

ಕ್ಷೇತ್ರದ ಪ್ರತಿಸ್ಪರ್ಧಿ ಮನೋಜ್ ತಿವಾರಿ ಅವರ ಆದೇಶದಂತೆ ದಾಳಿ ನಡೆದಿದೆ ಎಂದು ಕನ್ಹಯ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories