12 ವರ್ಷದ ಬಳಿಕ ಅಕ್ಷಯ್‌ ಅವರ OMG-2 ಸಿನಿಮಾಕ್ಕೆ ʼಎʼ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್‌ ಬೋರ್ಡ್

ಮುಂಬಯಿ: ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿರುವ ಅಕ್ಷಯ್‌ ಕುಮಾರ್‌ ಅಭಿನಯಯದ ʼಓ ಮೈ ಗಾಡ್-2”‌ ಸಿನಿಮಾ ಕೊನೆಗೂ ಸೆನ್ಸಾರ್‌ ನಲ್ಲಿ ಪಾಸ್‌ ಆಗಿದೆ.

ಅಮಿತ್ ರೈ ನಿರ್ದೇಶನದ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ʼಶಿವʼನ ಪಾತ್ರದಲ್ಲಿ ನಟಿಸಿರುವುದು ಒಂದಷ್ಟು ಸಮಸ್ಯೆಗೆ ಕಾರಣವಾಗಿತ್ತು. ಸಿನಿಮಾದ ಟೀಸರ್‌ ಸದ್ದು ಮಾಡಿದ ಬಳಿಕ ಸಿನಿಮಾಕ್ಕೆ ಪ್ರಮಾಣಪತ್ರ ಸಿಗಲು ವಿಳಂಬವಾದ ವಿಚಾರದಿಂದ ರಿಲೀಸ್‌ ಗೂ ವಿವಾದಕ್ಕೆ ಸಿಲುಕುವ ಸಾಧ್ಯತೆಗಳಿತ್ತು.

ಲೈಂಗಿಕ ಶಿಕ್ಷಣದ ಕಥಾಹಂದರವನ್ನು ಹೊಂದಿದ ಸಿನಿಮಾ ಇದಾಗಿದ್ದು, ಕೆಲ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಸಲಹೆಗಳನ್ನು ಚಿತ್ರತಂಡಕ್ಕೆ ಮಂಡಳಿ ನೀಡಿತ್ತು. ಅದರಂತೆ ಇದೀಗ ಸೆನ್ಸಾರ್‌ ಬೋರ್ಡ್‌ ಸಿನಿಮಾಕ್ಕೆ ʼಎʼ ಸರ್ಟಿಫಿಕೇಟ್‌ ನೀಡಿದೆ. ಅಂದರೆ ಸಿನಿಮಾವನ್ನು ವಯಸ್ಕರು ಮಾತ್ರ ನೋಡಬೇಕೆನ್ನುವ ಪ್ರಮಾಣ ಪತ್ರ.

ʼಓ ಮೈಗಾಡ್-2‌ʼ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿ ʼಎʼ ಸರ್ಟಿಫಿಕೇಟ್‌ ನೀಡಿದೆ. ಸಿನಿಮಾ 2:36 ನಿಮಿಷ 10 ಸೆಕಂಡ್‌ ಇರಲಿದೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ಸಿನಿಮಾದಲ್ಲಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. ಆದರೆ ಚಿತ್ರವು ಲೈಂಗಿಕ ಶಿಕ್ಷಣದ ಸೂಕ್ಷ್ಮ ವಿಷಯದೊಂದಿಗೆ ವ್ಯವಹರಿಸುವ ಕಾರಣದಿಂದ  ಕೆಲ ಡೈಲಾಗ್ಸ್‌ ಗಳಿಗೆ ಕತ್ತರಿ ಹಾಕಲಾಗಿದೆ ಎಂದು ಸೆನ್ಸಾರ್‌ ಮಂಡಳಿ ಮೂಲಗಳು ತಿಳಿಸಿರುವುದಾಗಿ ʼಇಂಡಿಯಾ ಟುಡೇʼ ವರದಿ ಹೇಳಿದೆ.

ಈ ಹಿಂದೆ ಅಕ್ಷಯ್‌ ಕುಮಾರ್‌ ಅವರ 2011 ರಲ್ಲಿ ಬಂದ ʼದೇಸಿ ಬಾಯ್ಸ್‌ʼ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್‌ ʼಎʼ ಸರ್ಟಿಫಿಕೇಟ್‌ ನೀಡಿತ್ತು.

ಸೆನ್ಸಾರ್‌ ನಲ್ಲಿನ ಬದಲಾವಣೆಯನ್ನು ಚಿತ್ರತಂಡ ಒಪ್ಪಿಕೊಂಡಿದೆ ಎಂದು ವರದಿ ತಿಳಿಸಿದೆ. ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಅವರೊಂದಿಗೆ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ಅರುಣ್ ಗೋವಿಲ್ ಮುಂತಾದವರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

Latest Indian news

Popular Stories