Entertainment

ರಜನಿಕಾಂತ್‌ಗೆ ಫಾಲ್ಕೆ ಪ್ರಶಸ್ತಿ

ನವದೆಹಲಿ : ಸೂಪರ್ ಸ್ಟಾರ್ ರಜನಿಕಾಂತ್ 51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಜಾವ್ಡೇಕರ್, 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಆಯ್ಕೆಗೊಂಡಿದ್ದಾರೆ. ಭಾರತದ ಸಿನೆಮಾ ರಂಗದಲ್ಲಿ ರಜನಿಕಾಂತ್ ಮೇರು ನಟ. ನಟರಾಗಿ, ನಿರ್ಮಾಪಕರಾಗಿ, ಚಿತ್ರ ಕಥೆಗಾರನಾಗಿ ಭಾರತೀಯ ಸಿನೆಮಾ ರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿದ ನಟ ಹಾಗೂ ನಿರ್ದೇಶಕ ಕಮಲ ಹಾಸನ್, ಸೂಪರ್ ಸ್ಟಾರ್ ಹಾಗೂ ನನ್ನ ಆತ್ಮೀಯ ಗೆಳೆಯ ರಜನಿಕಾಂತ್ ಈ ಪ್ರಶಸ್ತಿಗೆ ಶೇಕಡಾ ನೂರಕ್ಕೆ ನೂರು ಅರ್ಹ ವ್ಯಕ್ತಿ. ಅವರು ಪರದೆ ಮೇಲೆ ಪ್ರೇಕ್ಷಕರನ್ನು ಇಷ್ಟು ಪ್ರಮಾಣದಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಪಂಚದಾದ್ಯAತ ಇರುವ ಅಭಿಮಾನಿಗಳಿಗೆ ಅರ್ಪಿಸುವುದಾಗಿ ತಲೈವ ರಜನೀಕಾಂತ್ ಹೇಳಿದ್ದಾರೆ. ಓ್ವಟರ್‌ನಲ್ಲಿ ಪತ್ರ ಪ್ರಕಟಿಸಿರುವ ಅವರು, ಇಂದು ನನಗೆ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರಕ್ಕೆ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ನಟನಾ ಪ್ರತಿಭೆಯನ್ನು ಕಂಡು ಪ್ರೋತ್ಸಾಹಿಸಿದ ಬಸ್ ಚಾಲಕ ಹಾಗೂ ಸ್ನೇಹಿತ ರಾಜ್ಬಹದೂರ್ ಅವರಿಗೆ ನಾನು ಬಡತನದಲ್ಲಿ ಬದುಕುತ್ತಿದ್ದಾಗಲೂ ನನ್ನನ್ನು ನಟನಾಗಿ ಮಾಡಲು ಅನೇಕ ತ್ಯಾಗ ಮಾಡಿದ ಸಹೋದರ ಸತ್ಯನಾರಾಯಣರಾವ್ ಕೇಜ್ರಿವಾಲ್ ಅವರಿಗೆ, ನನ್ನನ್ನು ತೆರೆಗೆ ಪರಿಚಯಿಸಿದ ಗುರು ಬಾಲಚಂದ್ರ ಅವರಿಗೆ, ಚಿತ್ರರಂಗದ ನಿರ್ಮಾಪಕರು,
ನಿರ್ದೇಶಕರು, ವಿತರಕರು, ತಂತ್ರಜ್ಞರು, ಮಾಧ್ಯಮ ಮಾಲೀಕರು, ತಮಿಳುನಾಡಿನ ಮುಖ್ಯಮಂತ್ರಿ ಯಡಪಾಡಿ ಪಳನಿ ಚಾಮಿ, ಉಪ ಮುಖ್ಯಮಂತ್ರಿ ಪನ್ವೀರ್ ಸೆಲ್ವಂ, ಡಿಎಂಕೆ ನಾಯಕ ಸ್ಟಾಲಿನ್, ಸ್ನೇಹಿತ ಹಾಗೂ ಖ್ಯಾತ ನಟ ಕಮಲಹಾಸನ್ ಹಾಗೂ ನನ್ನನ್ನು ಸದಾ ಕಾಲ ಪ್ರೀತಿಸುತ್ತಿರುವ ಜನರಿಗೆ ಧನ್ಯವಾದಗಳು ಎಂದು ಸೂಪರ್ ಸ್ಟಾರ್ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button