ಅಲ್ತಾಫ್ ಕಸ್ಟಡಿ ಸಾವು: ಅಪರಿಚಿತ ಅಧಿಕಾರಿಗಳ ವಿರುದ್ಧ ಕಾಸ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು

ಉ.ಪ್ರ: ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶನಿವಾರದಂದು ಕಾಸ್‌ಗಂಜ್ ಪೊಲೀಸ್ ಠಾಣೆಯೊಳಗೆ 22 ವರ್ಷದ ಮುಸ್ಲಿಂ ಯುವಕನ ಸಾವಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಅಪರಿಚಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ತನ್ನ ಮಗನನ್ನು ಕೊಲ್ಲಲಾಗಿದೆ ಎಂದು ಮೃತ ಅಲ್ತಾಫ್ ತಂದೆ ಚಾಂದ್ ಮಿಯಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಕಳೆದ ವಾರ ಅಲ್ತಾಫ್ ಹಿಂದೂ ಮಹಿಳೆಯನ್ನು ಅಪಹರಿಸಿದ ಆರೋಪದ ನಂತರ, ಅವರನ್ನು ವಿಚಾರಣೆಗಾಗಿ ಕಾಸ್ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಂಗಳವಾರ ಸಂಜೆ ಪೊಲೀಸ್ ಠಾಣೆಯ ವಾಶ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದರು.

ತನ್ನ ಜಾಕೆಟ್‌ನ ಹುಡ್‌ನ ಡ್ರಾಸ್ಟ್ರಿಂಗ್ ಬಳಸಿ ವಾಶ್‌ರೂಮ್‌ನಲ್ಲಿ ಟ್ಯಾಪ್‌ನಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರೆ, ಅಲ್ತಾಫ್ ಅವರ ಕುಟುಂಬ ಸದಸ್ಯರು ಪೊಲೀಸ್ ಕಸ್ಟಡಿಯಲ್ಲಿ ಕೊಲೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಐದು ಅಡಿ ಎತ್ತರದ ವ್ಯಕ್ತಿ ಎರಡು ಅಡಿ ಎತ್ತರದ ನೀರಿನ ಟ್ಯಾಪ್‌ನಿಂದ ನೇಣು ಬಿಗಿದುಕೊಳ್ಳಲು ಸಾಧ್ಯವಿಲ್ಲ ಎಂದು ಚಾಂದ್ ಮಿಯಾನ್ ಪೊಲೀಸರ ಹೇಳಿಕೆಯನ್ನು ವಿರೋಧಿಸಿದ್ದಾರೆ ಎಂದು ಎಫ್‌ಐಆರ್’ನಲ್ಲಿ ಉಲ್ಲೇಖಿಸಲಾಗಿದೆ.

ಪತ್ರವೊಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಮತ್ತು ಅದರ ವಿಷಯಗಳು ಪೊಲೀಸರಿಂದ ತನಗೆ ತಿಳಿದು ಬಂದಿಲ್ಲ ಎಂದು ಚಾಂದ್ ಮಿಯಾನ್ ಗುರುವಾರ ಹೇಳಿದ್ದರು.

ಮಿಯಾನ್ ತನ್ನ ಉದ್ದೇಶಿತ ಪತ್ರದಲ್ಲಿ ಕಾಸ್ಗಂಜ್ ಪೊಲೀಸರನ್ನು ತನ್ನ ಮಗನ ಸಾವಿಗೆ ಸಂಬಂಧಿಸಿದ ಆಪಾದನೆಯಿಂದ ಮುಕ್ತಗೊಳಿಸಲಾಗಿದೆ. ಅಲ್ತಾಫ್ ಖಿನ್ನತೆಗೆ ಒಳಗಾಗಿದ್ದರು ಎಂದೂ ಪತ್ರದಲ್ಲಿ ಉಲ್ಲೇಖಿಸಿ ಬರೆಯಲಾಗಿತ್ತು.

ಭಾನುವಾರದ ದಿ ಹಿಂದೂ ವರದಿಯ ಪ್ರಕಾರ, ಯುವತಿಯ ಕುಟುಂಬದ ಯಾರೋ ಒಬ್ಬರು 22 ವರ್ಷದ ಅಲ್ತಾಫ್ ತಲೆಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರಯ ಎಂದು ಚಾಂದ್ ಮಿಯಾನ್ ಆರೋಪಿಸಿದ್ದಾರೆ.

“ನಾನು ಪೊಲೀಸ್ ಚೌಕಿ [ಸ್ಟೇಷನ್] ತಲುಪಿದಾಗ, ನನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ನಾನು ಗಮನಿಸಿದೆ ಆದರೆ ಪೊಲೀಸರು ನನ್ನನ್ನು ಹಿಂದಕ್ಕೆ ಕಳುಹಿಸಿದರು. ನಾವು ಶವವನ್ನು ಸ್ವೀಕರಿಸಿದಾಗ ಕುತ್ತಿಗೆಯ ಮೇಲಿನ ಗುರುತು ಹೊರತುಪಡಿಸಿ ಅದರ ಕಾಲುಗಳ ಮೇಲೆ ಊತವಿತ್ತು, ”ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ ಅಪರಿಚಿತ ಪೊಲೀಸರ ವಿರುದ್ಧ ಭಾರತೀಯ ದಂಡ ಸಂಹಿತೆ 302 (ಕೊಲೆಗೆ ಶಿಕ್ಷೆ) ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾಸ್ಗಂಜ್ ಪೊಲೀಸ್ ಅಧೀಕ್ಷಕ ರೋಹನ್ ಪ್ರಮೋದ್ ಬೋಟ್ರೆ ಹೇಳಿದ್ದಾರೆ.

ಇದಲ್ಲದೆ ಮೃತ ಅಲ್ತಾಫ್ ಮತ್ತು ಆತನ ಸ್ನೇಹಿತನಿಂದ ಅಪಹರಣಕ್ಕೊಳಗಾಗಿದ್ದ ಮಹಿಳೆಯು ಶುಕ್ರವಾರ ಸಂಜೆ ಚೇತರಿಸಿಕೊಂಡಿದ್ದಾರೆ. ಆಕೆಯ ಹೇಳಿಕೆಯನ್ನು ಭಾನುವಾರ ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗುವುದು.

ಏತನ್ಮಧ್ಯೆ, ಕರ್ತವ್ಯದ ನಿರ್ಲಕ್ಷ್ಯಕ್ಕಾಗಿ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದರು. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಶುಕ್ರವಾರ ಕಸ್ಟಡಿ ಸಾವಿನ ಕುರಿತು ಯುಪಿಯ ಪೊಲೀಸ್ ಮಹಾನಿರ್ದೇಶಕ ಮತ್ತು ಮುಖ್ಯ ಕಾರ್ಯದರ್ಶಿಯಿಂದ 15 ದಿನಗಳಲ್ಲಿ ವರದಿ ಕೊಡುವಂತೆ ಕೇಳಿದೆ.

Latest Indian news

Popular Stories