ಟಿ-20 ಕ್ರಿಕೆಟ್: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ

ಮಲಾಹೈಡ್‌ನ ದಿ ವಿಲೇಜ್‌ನಲ್ಲಿ ನಡೆದ ಮೊದಲ T20I ನಲ್ಲಿ ಭಾರತವು ಐರ್ಲೆಂಡ್‌ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ. ದೀಪಕ್ ಹೂಡಾ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಬರುವ ಹೂಡಾ ಒಪನಿಂಗ್ ಬಂದು 47(29) ರನ್ ಗಳಿಸಿ ಅಜೇಯರಾಗಿ ಮರಳಿದರು.

ಅವರ ಪ್ರಯತ್ನದಿಂದಾಗಿ ಭಾರತವು 9.2 ಓವರ್‌ಗಳಲ್ಲಿ 109 ರನ್‌ಗಳ ಸವಾಲನ್ನು ಸುಲಭವಾಗಿ ಬೆನ್ನಟ್ಡಿತು. ಏಕೆಂದರೆ ಮಳೆಯಿಂದಾಗಿ ಮುಖಾಮುಖಿಯನ್ನು 12 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು.

ಜೋಶುವಾ ಲಿಟಲ್ ವಿರುದ್ಧ LBW ಔಟ್ ಆಗುವ ಮೊದಲು 24(12) ಎಸೆತಗಳನ್ನು ಗಳಿಸಿದ ಹೂಡಾ ನಾಯಕನಿಂದ ಉತ್ತಮ ಬೆಂಬಲವನ್ನು ಪಡೆದರು. ಇಶಾನ್ ಕಿಶನ್ ಕೂಡ 11 ಎಸೆತಗಳಲ್ಲಿ 26 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಡಕ್ ಆಗಿ ಔಟಾದರು.

ಹ್ಯಾರಿ ಟೆಕ್ಟರ್ ಅಜೇಯ 64(33) ಗಳಿಸಿ ಐರ್ಲೆಂಡ್ 12 ಓವರ್‌ಗಳಲ್ಲಿ 108/4 ಸವಾಲಿನ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. 193.94 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಬಲಗೈ ಬ್ಯಾಟರ್ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳನ್ನು ಹೊಡೆದರು.

ಭುವನೇಶ್ವರ್ ಕುಮಾರ್ ಮೊದಲ ಓವರ್‌ನಲ್ಲಿ ಭಾರತಕ್ಕೆ ವಿಕೆಟ್ ಒದಗಿಸಿದರು. ಒಂದು ಹಂತದಲ್ಲಿ ಐರ್ಲೆಂಡ್ 23/3ಕ್ಕೆ ಕುಸಿದಾಗ ಅವೇಶ್ ಖಾನ್ ವಿಕೆಟ್ ಪಡೆದರು. ಆದಾಗ್ಯೂ, ಟೆಕ್ಟರ್ ಮತ್ತು ಲೋರ್ಕನ್ ಟಕರ್ ನಡುವಿನ 50-ರನ್ ಪಾಲುದಾರಿಕೆಯು ಐರ್ಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಹಾಯ ಮಾಡಿತು.

Latest Indian news

Popular Stories